ಫೇಸ್‌ಬುಕ್‌ ಪಕ್ಷಪಾತ ಧೋರಣೆ ವಿರುದ್ಧ ವೆಲ್ಫೇರ್ ಪಾರ್ಟಿ ಖಂಡನೆ: ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೆ ಆಗ್ರಹ

0
520

ಸನ್ಮಾರ್ಗ ವಾರ್ತೆ

ಬೆಂಗಳೂರು,ಆ.21:ಫೇಸ್‌ಬುಕ್‌ನ ಪಕ್ಷಪಾತವನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಬಲವಾಗಿ ಖಂಡಿಸುತ್ತದೆ ಹಾಗೂ ಭಾರತದಲ್ಲಿ ಫೇಸ್‌ಬುಕ್‌ ಮತ್ತು BJPಯ ಸಂಬಂಧವಿದೆ ಎಂದು ಆರೋಪಿಸುತ್ತದೆ ಹಾಗೂ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸುವಂತೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ.

ಫೇಸ್‌ಬುಕ್‌ ಮತ್ತು ಇತರ ಸಾಮಾಜಿಕ ಜಾಲತಾಣಗಳು ಜನರ ವೇದಿಕೆಯಾಗಿದ್ದು, ಇವು ಮುಕ್ತ ಹಾಗೂ ಯಾವುದೇ ರಾಜಕೀಯ ಒಲವು ಇಲ್ಲದೆ ಉಳಿಯಬೇಕು. ಆದರೆ ಫೇಸ್‌ಬುಕ್‌ನ ಮತ್ತು ಬಿಜೆಪಿಯ ನಡುವಿನ ಸಂಬಂಧವು ಅತ್ಯಂತ ದುರದೃಷ್ಟಕರ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರು ಡಾ. ಎಸ್‌ಕ್ಯೂಆರ್ ಇಲಿಯಾಸ್‌ರವರು ಹೇಳಿದರು.

ತನ್ನ ಅತ್ಯಂತ ದೊಡ್ಡ ಮಾರುಕಟ್ಟೆಯನ್ನು ಉಳಿಸುವ ಆಸಕ್ತಿಯಿಂದ ಫೇಸ್‌ಬುಕ್‌, ಬಿಜೆಪಿ ನಾಯಕರಿಗೆ ದ್ವೇಷದ ಭಾಷಣ ಮಾಡಲು ಅವಕಾಶ ಕೊಡುತ್ತಿರುವುದರೊಂದಿಗೆ ಕಂಪೆನಿ ನೀತಿಯ ಉಲ್ಲಂಘನೆ ಮಾಡುತ್ತಿರುವುದು ಅವಮಾನಕರ ಎಂದು ಅವರು ಹೇಳಿದರು.

ಫೇಸ್‌ಬುಕ್ ಹಿಂಸೆಯನ್ನು ಪ್ರಚೋದಿಸುವ ದ್ವೇಷದ ಭಾಷಣೆಗಳನ್ನು ಸಾಗಿಸುವುದರಿಂದ ಭಾರತ ಸಮಾಜದಲ್ಲಿ ಧ್ರುವಿಕರಣಕ್ಕೆ ಕಾರಣವಾಗಿದೆ ಹಾಗೂ ಇದು ಭಾರತದ ಚುನಾವಣೆಯಲ್ಲಿ ಪ್ರಭಾವ ಬೀರುತ್ತದೆ ಎಂದು ಅವರು ಆರೋಪಿಸಿದರಲ್ಲದೇ, ಇದು ಫೇಸ್‌ಬುಕ್‌ ನೀತಿಗಳ ವಿರುದ್ಧವಾಗಿದೆ ಆದ್ದರಿಂದ ಫೇಸ್‌ಬುಕ್‌ನ ತಮ್ಮ ನೀತಿಗಳಿಗೆ ಬದ್ಧರಾಗಿರಬೇಕೆಂದು ಎಂದು ಹೇಳಿದರು.

ಸಾರ್ವಜನಿಕ ನೀತಿಯ ಉಚ್ಚ ಕಾರ್ಯನಿರ್ವಾಹಕರಾದಂತಹ ಶ್ರೀಮತಿ ಅಂಖಿ ದಾಸ್‌ರನ್ನು ತಕ್ಷಣ ಅಮಾನತುಗೊಳಿಸಬೇಕು ಹಾಗೂ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರಾದಲ್ಲಿ ತಕ್ಕ ಶಿಕ್ಷೆಗೆ ಒಳಪಡಿಸಬೇಕು ಎಂದು ಇಲಿಯಾಸ್ ಆಗ್ರಹಿಸಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.