ಅಮೆರಿಕ ಪತನದ ಮುನ್ಸೂಚನೆಯೇ?

0
810

✍️ ಅರಫಾ ಮಂಚಿ

ವೆನೆಝುವೇಲದ ಅಧ್ಯಕ್ಷರ ಅಪಹರಣದ ನಂತರ ಜಗತ್ತೇ ಸಕ್ರಿಯವಾಗಿದೆ. ಅದು ಅಮೆರಿಕದ ಪರ ಅನ್ನುವ ಹಾಗಿಲ್ಲ. ವಿರೋಧ ಅಂತ ಹೇಳಲು ಈಗ ಸಮಯವೂ ಆಗಿಲ್ಲ. ಉತ್ತರ ಕೊರಿಯದ ಕಿಂ ಜಂಗ್ ಉನ್ ತನ್ನ ಸೈನ್ಯವನ್ನು ಯುದ್ಧಸಜ್ಜಾದ ಸ್ಥಿತಿಯಲ್ಲಿರಿಸಿದ್ದು ಸುದ್ದಿಯಾಗಿದೆ. ಚೀನ ಸೇನೆಯನ್ನು ಅಲರ್ಟಿನಲ್ಲಿರಿಸಿದ ವಾರ್ತೆಯೂ ಬಂದಿದೆ. ಇರಾನ್ ಈಗಾಗಲೇ ಎಚ್ಚರಿಕೆ ನೀಡುತ್ತಿದೆ. ಕೊಲಂಬಿಯದ ಅಧ್ಯಕ್ಷರು ದೇಶಕ್ಕಾಗಿ ಟ್ರಂಪ್‌ನೊಂದಿಗೆ ಯುದ್ಧ ಮಾಡುತ್ತೇನೆ ಎಂದು ಘೋಷಿಸಿ ಬಿಟ್ಟಿದ್ದಾರೆ. ರಷ್ಯ ಖಂಡಿಸಿದೆ. ಚೀನ ಸಹಿತ ಜಗತ್ತಿನ ಎಲ್ಲ ದೇಶಗಳು ವೆನೆಝುವೇಲ ಅಧ್ಯಕ್ಷರನ್ನು ಶೀಘ್ರ ಬಿಡುಗಡೆಗೊಳಿಸಿ ಕಳಿಸಿ ಎಂದು ಟ್ರಂಪ್‌ಗೆ ಹೇಳಿವೆ. ಒಟ್ಟಿನಲ್ಲಿ ಜಗತ್ತಿನ ಮಿಕ್ಕೆಲ್ಲ ದೇಶಗಳು ಟ್ರಂಪ್ ದಾದಾಗಿರಿಯನ್ನು ಒಪ್ಪಲು ತಯಾರಿಲ್ಲ. ಯಾವ ದೇಶವೂ ತಮ್ಮ ಮೇಲೆ ಒಬ್ಬ ಅಣ್ಣ ಇರುವುದನ್ನು ಒಪ್ಪುವುದಿಲ್ಲ ಬಿಡಿ. ಅಮೆರಿಕ ವೆನೆಝುವೇಲ ಅಧ್ಯಕ್ಷರನ್ನು ಕಳ್ಳನಂತೆ ಅಪಹರಿಸಿ ಸಾಧಿಸಿದ್ದು ಏನು? ಇಡೀ ಜಗತ್ತಿನ ವೈರವನ್ನು ಕಟ್ಟಿಕೊಂಡದ್ದು.

ಕಳ್ಳನಂತೆ ಬಂದರು: ಕಾರ್ಯಾಚರಣೆ ಅಂತ ಕರೆದರು:

ಅಮೆರಿಕದ ಸಮಯ ಕಳೆದ ಜ. 3ರಂದು ಬೆಳ್ಳಂಬೆಳಗ್ಗೆ ವೆನೆಝುವೇಲದ ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಅವರ ಪತ್ನಿ ಸೆಲಿಯಾ ಪ್ಲೋರ್ಸ್ರನ್ನು ಅಮೆರಿಕ ಅಪಹರಿಸಿದ ನಂತರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಾನೆತ್ತರಕ್ಕೆ ಹಾರುತ್ತಿದ್ದಾರೆ. ಅವರ ಹೇಳಿಕೆಗಳು ಅವರ ಹಕ್ಕುವಾದಗಳು ಶೌರ್ಯಭರಿತ ಮಾತುಗಳು ಹೊರ ಬರುತ್ತಿವೆ. ಮುಂಜಾನೆ ಬೆಳಕು ಹರಿಯುವ ಮುಂಚೆ ಕಳ್ಳನಂತೆ ಬಂದು ಎತ್ತಿಕೊಂಡು ಹೋಗುವುದು ಶೌರ್ಯದ ಕತೆ ಹೇಗಾಗುತ್ತೋ ಗೊತ್ತಿಲ್ಲ.

ಮಾದಕವಸ್ತು ಕಳ್ಳಸಾಗಾಟ ತಡೆಯುವಲ್ಲಿ ವೆನೆಝುವೇಲ ಸೋತಿದೆ ಎಂದು ಈ ಅಪಹರಣಕ್ಕೆ ಅವರು ಕತೆ ಕಟ್ಟುತ್ತಿದ್ದಾರೆ. ಈ ಕತೆಯನ್ನು ಜಗತ್ತು ಒಪ್ಪಬೇಕಲ್ಲ. ಅಮೆರಿಕಕ್ಕೆ ವೆನೆಝುವೇಲದಲ್ಲಿರುವ ಕಚ್ಚಾ ತೈಲದ ಮೇಲೆ ಕಣ್ಣಿದೆ. ಅದನ್ನು ನಿಯಂತ್ರಣಕ್ಕೆ ಪಡೆಯ ಬೇಕಿತ್ತು. ಅದಕ್ಕಾಗಿ ಅದು ಏನನ್ನೂ ಮಾಡಬಹುದು ಎಂದು ಎಲ್ಲರಿಗೂ ಗೊತ್ತಿತ್ತು. ವೆನೆಝುವೇಲ ಅಧ್ಯಕ್ಷರು ಅಮೆರಿಕದ ಹಿತಾಸಕ್ತಿಗೆ ತನ್ನ ದೇಶವನ್ನು ಒತ್ತೆಯಿಡುವವರಿಗೆ ಅಡ್ಡಿಯಾಗಿದ್ದರು. ನೆಪಕ್ಕೆ ಕೊಕೆಯಿನ್‌ನಂತಹ ಮಾದಕ ವಸ್ತು ಸಾಗಾಟ ಆರೋಪ ಹೊರಿಸಿ ಅವರನ್ನೇ ಟ್ರಂಪ್ ಎತ್ತಿಕೊಂಡು ಹೋದರು.

ಜಗತ್ತಿಗೆ ಬೇಲಿ ಹಾಕ ಹೊರಟ ಅಮೆರಿಕ;

ಮುಂದೆ ಕ್ಯೂಬ, ಕೊಲಂಬಿಯ, ಮೆಕ್ಸಿಕೊ ದೇಶಗಳಲ್ಲಿ ಕೂಡ ಟ್ರಂಪ್ ವೆನೆಝುವೇಲದಂತಹ ಕೃತ್ಯ ನಡೆಸಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಲ್ಯಾಟಿನ್ ಅಮೆರಿಕ ದೇಶಗಳಿಗೆ ಈ ಚರ್ಚೆ ಸೀಮಿತವಾಗಿಲ್ಲ. ಈಗ ಏಷ್ಯಕ್ಕೂ ಹರಡಿದೆ. ಚೀನ, ಉತ್ತರ ಕೊರಿಯ, ಇರಾನ್ ಜೊತೆಗೆ ಭಾರತದ ಅಗ್ರಗಣ್ಯ ನಾಯಕರಿಗೂ ಈ ಗತಿ ಬರಬಹುದು ಎಂಬ ವರದಿಗಳು ಪಸರಿಸಿವೆ. ಸತ್ಯಾಂಶ ಏನೇ ಇದ್ದರೂ ಅಮೆರಿಕ ಯಾವುದಕ್ಕೂ ಹೇಸುವುದಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಅದರಲ್ಲೂ ಭಾರತಕ್ಕೆ ಟ್ರಂಪ್ ಆಗಾಗ ಸಾಫ್ಟ್ ಧಮಕಿ ಹಾಕುತ್ತಿರುತ್ತಾರೆ. ತೆರಿಗೆ ಏರಿಸುವ ಬೆದರಿಕೆ ಇದರಲ್ಲಿ ಒಂದು. ಪಾಕಿಸ್ತಾನ ಭಾರತ ಯುದ್ಧ ನಿಲ್ಲಿಸಿದ್ದು. ನಾನೇ ಎಂದು ಕೊಚ್ಚಿಕೊಂಡು ನಮ್ಮ ದೇಶದ ನಾಯಕರನ್ನು ಆಗಾಗ ಅಪಮಾನಿಸುತ್ತಲಿರುತ್ತಾರೆ. ಈ ಬೇಲಿಯನ್ನು ಮುರಿಯುವ ಗೋಜಿಗೆ ಈ ನಾಯಕರು ಮನಸ್ಸು ಮಾಡವುದೂ ಇಲ್ಲ ಎಂಬುದು ಇನ್ನೊಂದು ವಿಚಾರ. ಆದರೆ ಕ್ಯೂಬ ಕೊಲಂಬಿಯ ಮೆಕ್ಸಿಕೊಗಳಲ್ಲಿ ಅದರ ಆಡಳಿತಗಾರರು ಮಾದಕ ವಸ್ತು ನಿಯಂತ್ರಿಸಲು ವಿಫಲವಾಗಿದ್ದಾರೆ ಎಂದು ಟ್ರಂಪ್ ಹೇಳುತ್ತಿದ್ದಾರೆ. ಈ ಎಲ್ಲ ನಾಡುಗಳನ್ನು ತನ್ನ ವಶಕ್ಕೆ ತರುವ ಶಕ್ತಿ ತನಗಿದೆ ಎಂಬಂತೆ ಟ್ರಂಪ್ ಹೇಳಿಕೆಗಳು ಹೊರಬರುತ್ತಿವೆ. ಆ ನಾಡಿನ ಅಧ್ಯಕ್ಷರನ್ನು ರಾತ್ರೋರಾತ್ರಿ ಅಪಹರಿಸಲೂ ಬಹುದು ಅನ್ಸುತ್ತೆ.

ಈಗ ಟ್ರಂಪ್ ವೆನೆಝುವೇಲದ ಐದು ಕೋಟಿ ಬ್ಯಾರಲ್ ತೈಲ ಅಮೆರಿಕದ ಕೈಯಲ್ಲಾಗಿದೆ ಎಂದು ಹೇಳುತ್ತಾ ಭುಜ ಕುಣಿಸುತ್ತಿದ್ದಾರೆ. ತೈಲ ವ್ಯವಹಾರ ನೋಡಿಕೊಂಡು ಅದರ ಹಣವನ್ನು ನಾವು ನಿಯಂತ್ರಿಸುತ್ತೇವೆ. ಮಿಕ್ಕಿ ಉಳಿಯುವ ಹಣವನ್ನು ವೆನೆಝುವೇಲ ಮತ್ತು ಅಮೆರಿಕದ ಜನರಿಗೆ ಖರ್ಚು ಮಾಡುತ್ತೇವೆ ಎನ್ನುತ್ತಿದ್ದಾರೆ. ಇನ್ನೊಂದು ಊರಿನ ತೈಲ ಭಂಡಾರವನ್ನು ದೋಚಿ, ಆ ಊರಿನ ನಾಯಕನನ್ನು ಆ ಊರಿಗೆ ಕಳ್ಳನಂತೆ ನುಗ್ಗಿ ಸೆರೆ ಹಿಡಿದು ತೈಲ ಭಂಡಾರದಿಂದ ಸಿಗುವ ವರಮಾನವನ್ನು ಆ ಊರಿಗೂ ಈ ಊರಿಗೂ ಹಂಚುವೆ ಎನ್ನುತ್ತಿರುವ ಟ್ರಂಪ್ ಯಾವುದೋ ಸಿನೆಮಾದ ಬಾಂಡ್ ನಟನಂತೆ ಟ್ರಂಪ್ ವರ್ತಿಸುತ್ತಿದ್ದಾರೆ. ದೋಚುವುದು ಹಂಚುವುದು ಇದು ಅಂಡರ್ ವರ್ಲ್ಡ್ ಡಾನ್‌ಗಳು ಮಾಡುವ ಕೆಲಸ. ಈ ಕೆಲಸವನ್ನು ಈಗ ಅಮೆರಿಕ ಕೈಗೆತ್ತಿಕೊಂಡಿದೆ.

ಮಾಡುವುದು ಕಳ್ಳನ ಕೆಲಸ, ಅದಕ್ಕೆ ಸೊಬಗನ ಫೋಸು

ಮೊದಲೇ ಹೇಳಿದಂತೆ ಜಗತ್ತಿನ ಮುಂದೆ ಸುಬಗನೆಂದನ್ನಿಸಿಕೊಳ್ಳಲಿಕ್ಕಾಗಿ ಅಮೆರಿಕ ವೆನೆಝುವೇಲದ ಮೇಲೆ ಡ್ರಗ್ಸ್ ಆರೋಪ ಹೊರಿಸಿ ತನ್ನ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಿದೆ. ಆದರೆ ತೈಲ ಒಡೆತನದ ಸಾಮ್ರಾಜ್ಯ ಸ್ಥಾಪಿಸಲು ಇದೊಂದು ಅಮೆರಿಕದ ಕಳ್ಳ ಮಿಶನ್ ಆಗಿದೆ ಎಂದು ಅಮೆರಿಕ ಬೆದರಿಕೆ ಹಾಕುತ್ತಿರುವ ಅದರ ಲೀಸ್ಟ್‌ನಲ್ಲಿರುವ ದೇಶಗಳು ಮಾತ್ರವಲ್ಲ ಅದರ ಹೊರಗಿರುವ ದೇಶಗಳು ಬಲವಾಗಿ ನಂಬಿವೆ. ಜೊತೆಗೆ ಸಾಕಷ್ಟು ಅಲರ್ಟ್ ಕೂಡಾ ಆಗಿವೆ. ವೆನೆಝುವೇಲ ಅತೀ ದೊಡ್ಡ ತೈಲ ಭಂಡಾರ ಹೊಂದಿದೆ. 300 ಬಿಲಿಯನ್ ಕ್ರೂಡ್ ಆಯಿಲ್ ಸಂಗ್ರಹವನ್ನು ಹೊಂದಿದೆ. ಸೌದಿ ಅರೇಬಿಯದ ಬಳಿ ಇರುವುದು 267 ಬಿಲಿಯನ್ ಕ್ರೂಡ್ ಆಯಿಲ್. ಇರಾನಿನ ಬಳಿ 207 ಬಿಲಿಯನ್ ಕ್ರೂಡ್ ಆಯಿಲ್ ಇದೆ.

ಕೆನಡದ ಬಳಿಯೂ ಇಷ್ಟೇ ಕ್ರೂಡ್ ಆಯಿಲ್ ಇದೆ. ಈಗ ಈ ಎಲ್ಲ ದೇಶಗಳನ್ನು ತನ್ನ ಹಿಡಿತದೊಳಗೆ ಸಿಲುಕಿಸಿ ಜಗತ್ತನ್ನು ನಿಯಂತ್ರಿಸುವ ಸೈತಾನ ಬುದ್ಧಿ ಅಮೆರಿಕ ತೋರಿಸಿದ್ದು. ಒಮ್ಮೆ ತೈಲ ಕೈಗೆ ಬಂದರೆ ಎಲ್ಲವೂ ಮುಗೀತು. ಚೀನ ರಷ್ಯ ಸಹಿತ ಯಾವ ದೇಶಗಳಿಗೂ ತನ್ನ ವಿರುದ್ಧ ಎದೆ ಎತ್ತಿ ನಿಲ್ಲುವ ತಾಕತ್ತು ತೋರಿಸಲು ಸಾಧ್ಯವಿಲ್ಲ ಎಂದು ಟ್ರಂಪ್ ಆಡಳಿತ ತಿಳಿದುಕೊಂಡಿದೆ. ಅದರ ಒಂದು ಸ್ಯಾಂಪಲ್ ವೆನೆಝುವೇಲದಲ್ಲಿ ಅಧ್ಯಕ್ಷರ ಅಪಹರಣ ಕೃತ್ಯ ಆಗಿದೆ. ವೆನೆಝುವೇಲದ ಘಟನೆಯಿಂದ ಜಗತ್ತಿನ ಇತರ ದೇಶಗಳನ್ನು ಹಳಿಗೆ ತರಬಹುದು ಎಂಬ ಚಿಂತನೆಯೂ ಇಲ್ಲಿದೆ.

ಈ ನಡುವೆ ರಷ್ಯ ಚೀನ ಅಮೆರಿಕದ ಪ್ರತಿಯೊಂದು ಹೆಜ್ಜೆಗಳ ಮೇಲೆ ಕಣ್ಣಿಟ್ಟಿದೆ. ಅಮೆರಿಕದ ನಿರ್ಬಂಧಕ್ಕೆ ಕವಡೆ ಬೆಲೆಯನ್ನೂ ಕೊಟ್ಟಿಲ್ಲ. ಈ ದೇಶಗಳು ವೆನೆಝುವೇಲದಿಂದ ಕಚ್ಚಾ ತೈಲವನ್ನು ತರಿಸಿಕೊಳ್ಳುತ್ತಿವೆ. ಆದರೆ ಕೆರಿಬಿಯನ್ ಸಮುದ್ರದಲ್ಲಿ ತೈಲ ಸಾಗಾಟವನ್ನು ನೌಕಾ ಸೇನೆಯ ಮೂಲಕ ತಡೆಯುವುದು ಮತ್ತು ಯುದ್ಧ ಹಡಗಿನ ಮೂಲಕ ವೆನೆಝುವೇಲದ ವ್ಯಾಪಾರವನ್ನು ಸಂಪೂರ್ಣ ತಡೆಹಿಡಿಯುವುದು ಅಮೆರಿಕ ಈಗ ಕಂಡು ಕೊಂಡಿರುವ ಟ್ರಿಕ್ಸ್ ಹೌದು,

ವೆನೆಝುವೇಲ ಹೆಜ್ಜೆ ಹಿಂದಿಟ್ಟಿತೇ

ಈ ಪ್ರಶ್ನೆ ಪ್ರಸ್ತುತಗೊಂಡಿದೆ. ಯಾಕೆಂದರೆ ಈಗ ಅಮೆರಿಕದ ಮುಂದಿರುವ ಒಂದು ಸಾಧ್ಯತೆ ವೆನೆಝುವೇಲದ ಕೊರಳು ಹಿಸುಕುವುದಾಗಿದೆ ಎಂಬ ಅರಿವಿನಿಂದ ಅದಯ ಒಂದು ಹೆಜ್ಜೆ ಹಿಂದಿಟ್ಟಿದೆ. ಈಗ ಅಥವಾ ಮಡುರೊರನ್ನು ಅಪಹರಿಸುವ ಮುಂಚಿನಿಂದಲೂ ವೆನೆಝುವೇಲದಲ್ಲಿ ಈ ಉಸಿರು ಗಟ್ಟಿಸುವ ಸ್ಥಿತಿಯನ್ನು ಅಮೆರಿಕ ಆರಂಭಿಸಿತ್ತು. ಇವೆಲ್ಲವನ್ನು ಅವಲೋಕಿಸಿ ಈಗ ಅಧ್ಯಕ್ಷೆಯಾಗಿ ನಿಯೋಜಿತರಾದ ಮಾಜಿ ಉಪಾಧ್ಯಾಕ್ಷೆ ಡೆಲ್ಸಿ ರಾಡ್ರಿಗಸ್ ಅಮೆರಿಕದೊಂದಿಗೆ ಚರ್ಚೆಯ ಟೇಬಲ್ ಮುಂದೆ ಬರಲು ಸಿದ್ಧವಾದರು ಎನ್ನಲಾಗುತ್ತಿದೆ. ಆದರೂ ಅವರು ಖಚಿತ ಧ್ವನಿಯಲ್ಲಿ ನಮ್ಮ ವೆನೆಝುವೆಲದ ತೈಲದ ಪುಲ್ ಕಂಟ್ರೋಲ್ ತಮ್ಮ ಕೈಯಲ್ಲಿರುತ್ತದೆ ಎಂದರು. ಡೆಲ್ಸಿ ರಾಡ್ರಿಗಸ್ ವೆನೆಝುವೇಲದ ತೈಲ ಕಂಪೆನಿ ಖಾತೆಯ ಸಚಿವೆಯೂ ಹೌದು. ಅಷ್ಟೇ ಅಲ್ಲ ತೈಲ ಕಂಪೆನಿಗಳಿಗೆ ಸಂಬಂಧಿಸಿದ ಒಬ್ಬ ಅಧಿಕಾರಿ ಕೂಡ ಆಗಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಅಮೆರಿಕ ವೆನೆಝುವೇಲದ ತೈಲಕ್ಕೆ ನಿಷೇಧ ಹೇರಿದ ಕಾರಣದಿಂದ ದೊಡ್ಡ ಪ್ರಮಾಣದಲ್ಲಿ ಟ್ಯಾಂಕ್ ಫಾರ್ಮುಗಳಲ್ಲಿ ತೈಲ ಸಂಗ್ರಹಗೊಂಡು ಬಾಕಿ ಉಳಿದಿದೆ. ವಿದೇಶಗಳು ವೆನೆಝುವೇಲದಿಂದ ಅಮೆರಿಕದ ನಿರ್ಬಂಧ ಇರುವುದರಿಂದ ಕಚ್ಚಾ ತೈಲ ಬೇರೆ ದೇಶಗಳು ಖರೀದಿಸುವುದು ಇಲ್ಲ. ಆದ್ದರಿಂದ ವೆನೆಝುವೇಲದ ಆರ್ಥಿಕ ಸ್ಥಿತಿ ಸ್ತಂಭಿಸಿದೆ. ಅಮೆರಿಕ ಎಂತಹ ಅಕ್ರಮಿ ಎಂಬುದನ್ನೆಲ್ಲ ಬಿಂಬಿಸುವ ಘಟನೆಗಳು ಇವು. ಈಗ ವೆನೆಝುವೇಲದ ತೈಲ ವನ್ನೂ ಅಪಹರಿಸಿ ಅಮೆರಿಕ ಮತ್ತು ವೆನೆಝುವೇಲ ಉದ್ಧಾರ ಮಾಡುವ ಮಾತಾಡುತ್ತಿದೆ. ಆದರೆ ವೆನೆಝುವೆಲ ತೈಲದ ನಿಯಂತ್ರಣವನ್ನು ಅಮೆರಿಕದ ಕೈಗೆ ವಹಿಸುವ ಕೊಡುವುದಕ್ಕೆ ಸರ್ವಥಾ ಸಿದ್ಧವಿಲ್ಲ. ಮಡುರೊ ಬಿಡುಗಡೆಯೊಂದಿಗೆ ತಮ್ಮ ತೈಲದ ಮೇಲೆ ಅಮೆರಿಕದ ಕಣ್ಣನ್ನು ಕಿತ್ತು ಹಾಕುವ ಹೊಣೆ ಡೆಲ್ಸಿ ರಾಡ್ರಿಗಸ್‌ರ ಮೇಲಿದೆ.

ಜಗತ್ತು ಮೌನ ಆದರೂ ಶೋಕ

ಮಡುರೊರ ಅಪಹರಣ ತೈಲ ಜಗತ್ತಿನ ನಿಯಂತ್ರಣದ ಕೆಟ್ಟ ಸಂಚಿನ ಭಾಗ ಎಂದು ಜಗತ್ತು ಅರ್ಥ ಮಾಡಿಕೊಂಡಿದ್ದರಿಂದ ಇಂದು ಟ್ರಂಪ್‌ರನ್ನು ಯಾರು ನಂಬುತ್ತಿಲ್ಲ. ನಾಳೆ ನಮ್ಮನ್ನೇ ಎತ್ತಿಕೊಂಡು ಹೋಗಬಹುದೆಂಬ ಹೆದರಿಕೆ ಬಹುತೇಕ ದೇಶಗಳ ಅಧಿನಾಯಕರಲ್ಲಿ ಸೃಷ್ಟಿಯಾಗಿದೆ. ಅಮೆರಿಕದ ಚಾಳಿಯೇ ಅಂತಹದ್ದು. ಏನೋನೋ ಕತೆಗಳನ್ನು ಕಟ್ಟಿ ಯರ‍್ಯಾರನ್ನೋ ಕ್ರಿಮಿನಲ್ ಮಾಡಿ ಬಲಿ ತೆಗೆದುಕೊಳ್ಳುತ್ತದೆ.

ನೋಡಿ, ಅಲ್ ಕಾಯಿದ ಲೀಡರ್ ಉಸಾಮಾ ಬಿನ್ ಲಾದೆನ್‌ನನ್ನು ಹುಟ್ಟು ಹಾಕಿದ್ದೂ ಇದೇ ಅಮೆರಿಕ. ಆತನನ್ನು ಜಾಗತಿಕ ಭಯೋತ್ಪಾದಕ ಮಾಡಿದ್ದೂ ಅಮೆರಿಕ. ವಾಸ್ತವದಲ್ಲಿ ಸೋವಿಯತ್ ಯೂನಿಯನ್ ವಿರುದ್ಧ ಸೆಣೆಸುವುದಕ್ಕೆ ಅಪ್ಘಾನಿಸ್ತಾನವನ್ನು ಬಳಸಿಕೊಳ್ಳಲು ಒಬ್ಬ ಎಕ್ಸ್ಟ್ರೀಮ್‌ ಬಿಸಿನೆಸ್‌ಮೆನ್ ಬೇಕಿತ್ತು. ಅಂತಹ ವ್ಯಕ್ತಿಯನ್ನು ಸೌದಿಯಿಂದ ಅಮೆರಿಕ ಹೆಕ್ಕಿಕೊಂಡಿತು. ರಷ್ಯಾ ವಿರುದ್ಧ ಮೆಶಿನ್‌ಗನ್ ಎತ್ತಿಕೊಂಡಿದ್ದ ಉಸಮಾ ಅಂದು ಯೋಧ. ಅಮೆರಿಕದ ವಿರುದ್ಧ ತಿರುಗಿದಾಗ ಭಯೋತ್ಪಾದಕ. ಉಸಾಮಾನನ್ನು ಕೊಂದು ಸಮುದ್ರದಲ್ಲಿ ಎಸೆದು ಜನಾಝ ಕೂಡ ಸಿಗದಂತೆ ಮಾಡಿತು ಅಮೆರಿಕ.

ಇದಕ್ಕಿಂತ ಮುಂಚೆ ಇರಾಕಿಗೆ ದಾಳಿ ಮಾಡಿದ್ದು ನಿಮಗೂ ಗೊತ್ತು. ಅಲ್ಲಿ ರಾಸಾಯನಿಕ ಆಯುಧ ಇದೆ ಎಂದು ಸುಳ್ಳು ಹೇಳಿ ಕೊನೆಗೆ ಇರಾಕನ್ನೇ ಸರ್ವನಾಶ ಮಾಡಿತು. ಅದಕ್ಕಿಂತ ಮೊದಲು ಇರಾಕನ್ನು ಇರಾನ್ ಮೇಲೆ ಛೂ ಬಿಟ್ಟದ್ದೂ ಇದೇ ಅಮೆರಿಕ. ಅವರಿಬ್ಬರನ್ನು ಯುದ್ಧ ಮಾಡಿಸಿದ್ದೂ ಇದೇ ಅಮೆರಿಕ. ಕೊನೆಗೆ ಸದ್ದಾಮ್ ಹುಸೈನ್‌ರನ್ನು ವಿಚಾರಣೆಯ ನೆಪದಲ್ಲಿ ಮರಣದಂಡನೆಗೆ ಗುರಿಪಡಿಸಿದ್ದೂ ಇದೇ ಅಮೆರಿಕ. ಐಎಸ್‌ಐ ಭಯೋತ್ಪಾದಕರ ಗುಂಪು ಕೂಡ ಇಸ್ರೇಲ್ ಅಮೆರಿಕದ ಜಂಟಿ ಸೃಷ್ಟಿಯಾಗಿತ್ತು. ಅದರ ಕಮಾಂಡರ್ ಅಬೂಬಕರ್ ಬಗ್ದಾದಿಯನ್ನು ಕೂಡ ಇದೇ ಅಮೆರಿಕ ಕೊಂದು ಹಾಕಿದ್ದು. ನಂತರ ಆತ ಒಬ್ಬ ಮುಸ್ಲಿಂ ಅಲ್ಲ ಯಹೂದಿ ಆಗಿದ್ದ ಎಂದು ಜಗತ್ತಿಗೆ ಗೊತ್ತಾಯಿತು. ಇಂತಹ ಧೂರ್ತ ಬುದ್ಧಿ ಅಮೆರಿಕಕ್ಕಿದೆ. ತನ್ನ ಹಿತಕ್ಕಾಗಿ ಯಾರ ಮನೆಗೂ ನುಗ್ಗಿ ಏನನ್ನೂ ಮಾಡಲು ಹೇಸದ ಜಗತ್ತಿನ ದೊಡ್ಡ ಕ್ರಿಮಿನಲ್ ದೇಶ
ಅಮೆರಿಕ. ಈ ಸತ್ಯ ಸ್ಥಿತಿ ಪ್ರಖರವಾದದ್ದು. ಇದು ಅರ್ಥವಾಗಲು ಪ್ರಖರ ಬೆಳಕಿನಲ್ಲಿ ಜಗತ್ತಿನ ಮುಂದೆ ಯಾರೂ ಲಾಟೀನು ಹಿಡಿಯಬೇಕಿಲ್ಲ.

ಈ ದುಸ್ಸಾಹಸಕ್ಕೆ ಬೆಲೆ ತೆರಬೇಕಾದೀತು

ಏನೇ ಹೇಳಿದರೂ ಈಗ ಅಮೆರಿಕಕ್ಕೆ ವೆನೆಝುವೆಲದ ತೈಲ ಉತ್ಪಾದನೆ ಮಾರುಕಟ್ಟೆಯನ್ನು ನಿಯಂತ್ರಿಸಲು ಸಾಧ್ಯವಲ್ಲ. ತಜ್ಞರ ಅಭಿಪ್ರಾಯದಲ್ಲಿ ತೈಲ ಮಾರುವುದು ಒಂದು ಸೈನಿಕ ಕಾರ್ಯಾ ಚರಣೆಯಂತಲ್ಲ. ಕದ್ದುಮುಚ್ಚಿ ಬಂದು ಎತ್ತಿಕೊಂಡು ಹೋಗುವುದಕ್ಕೆ ಸಂಬಂಧಿಸಿದ್ದಲ್ಲ. ತೈಲ ಬಾವಿ ತೋಡುವುದರಿಂದ ಹಿಡಿದು ಜಗತ್ತಿಡೀ ಮಾರುವುದು ಬಹುಮಟ್ಟದ ವ್ಯವಹಾರವಾಗಿದೆ. ಇದಕ್ಕೆ ತೈಲ ಮಾರುವ ಕಂಪೆನಿಗಳು ಸಹಾಯ ಬೇಕೇ ಬೇಕು. ಅದು ಸಾಧ್ಯವಾಗ ಬೇಕಿದ್ದರೆ ವಿದೇಶಿ ಕಂಪೆನಿಗಳು ಬುಟ್ಟಿಗೆ ಹಾಕಿ ಕೊಳ್ಳಬೇಕಾಗುತ್ತದೆ. ಅಮೆರಿಕ/ಜಾಗತಿಕ ತೈಲ ಬೃಹತ್ ಕಂಪೆನಿಗಳಾದ ಎಕ್ಸಾನ್-ಮೊಬಿಲ್, ಶೆವರೋನ್, ಕೊನೊಕ್ಕೊ, ಫಿಲಿಪಸ್ ಮುಂತಾದ ಕಂಪೆನಿಗಳಲ್ಲಿ ಟ್ರಂಪ್ ಆಪರೇಶನ್‌ಗಿಳಿಯ ಬೇಕಾಗುತ್ತದೆ. ಅದು ಅಷ್ಟು ಸುಲಭ ಅಂತ ಗೊತ್ತಾಗುವುದೂ ಇಲ್ಲ.

ಯಾಕೆಂದರೆ ಇವೆಲ್ಲ ಕಂಪೆನಿಗಳು ವಿದೇಶ ಗಳಲ್ಲಿ ಹೂಡಿಕೆ ಮಾಡುವಾಗ ಆ ದೇಶದ ನೆಲದ ಕಾನೂನಿನ ಪ್ರಕಾರವೇ ಇರುತ್ತದೆ. ಅಲ್ಲಿನ ರಾಜಕೀಯ, ಆರ್ಥಿಕ ಸ್ಥಿರತೆ, ಕಾನೂನು ವ್ಯವಸ್ಥೆ ಇತ್ಯಾದಿಗಳನ್ನು ನೋಡಿ ತೀರ್ಮಾನ ಮಾಡಲಾಗುತ್ತದೆ. ರಾಜಕೀಯ ಅನಿಶ್ಚಿತತೆ ಇದ್ದರೆ ಯುದ್ಧ ಸಮಾನ ಪರಿಸ್ಥಿತಿ ಇದ್ದರೆ ಅಲ್ಲಿ ದೊಡ್ಡ ಮೊತ್ತದ ಹೂಡಿಕೆ ಮಾಡುವುದಕ್ಕೂ ಆಗುವುದಿಲ್ಲ. ಅಮೆರಿಕದ ಹಿಡನ್ ಅಜೆಂಡದಿಂದ ಜಗತ್ತೇ ಅಲರ್ಟಾಗಿರುವಾಗ ಕೆಲವು ದೇಶಗಳು ಯುದ್ಧಕ್ಕೂ ಸಿದ್ಧವಾಗಿರುವಾಗ ತೈಲ ಮಾರುಕಟ್ಟೆಯನ್ನು ಒಲಿಸಿಕೊಂಡು ವೆನುಝುವೇಲದಿಂದ ಕದ್ದ ತೈಲಕ್ಕೆ ಮರ‍್ಕೇಟ್ ಮಾಡುವುದು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ.

ಹಾಗಿದ್ದರೆ ಟ್ರಂಪ್ ಜಗತ್ತನ್ನೇ ಮುಷ್ಠಿಯಲ್ಲಿರಿಸ ಬೇಕಾಗುತ್ತದೆ. ಹಾಗೆ ಹೊರಟದ್ದು ಕೂಡ. ಆದರೆ ಜಗತ್ತಿನ ಇತರ ದೇಶಗಳು ಸುಮ್ಮಾನಿರುತ್ತವೆ ಎಂದು ಹೇಳುವುದಕ್ಕೆ ನಮ್ಮ ಬಳಿ ಯಾವ ಕಾರಣಗಳೂ ಇಲ್ಲ. ಚೀನ, ಉ.ಕೊರಿಯ, ರಷ್ಯ ಸಹಿತ ಅರಬ್ ದೇಶಗಳು ಕೂಡ ಅಮೆರಿಕವನ್ನೇ ನಿಯಂತ್ರಿಸಲಿಕ್ಕೆ ಹೊರಟೇ ಹೊರಡುತ್ತವೆ. ಯಾರಾದರೂ ಅಮೆರಿಕಕ್ಕೆ ಆತು ಕೂತು ಕೊಳ್ಳುವುದಿಲ್ಲ. ನಂತರ ಜಾಗತಿಕ ದೇಶಗಳು ಅಮೆರಿಕದ ತೈಲ ಸ್ಫೋಟದಿಂದಾಗಿ ಕೊನೆಗೆ ಹೋರಾಟಕ್ಕಿಳಿಯುತ್ತವೆ.