ನಿಮ್ಮ ಗ್ಯಾಸ್ ಸಿಲಿಂಡರ್ ಸುರಕ್ಷಿತವೇ? ಪರೀಕ್ಷಿಸಿದ್ದೀರಾ?

0
450

ಸನ್ಮಾರ್ಗ ವಾರ್ತೆ

✍️ಶಮೀರ ಜಹಾನ್,ಮಂಗಳೂರು

ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡಾಗ ಯಾವ ರೀತಿ ರಕ್ಷಣೆ ಹೊಂದಬಹುದು ಎಂಬ ವೀಡಿಯೋಗಳು ಕೆಲವು ಸಮಯದಿಂದ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಮನೆಯವರಲ್ಲಿ ಆಗುವ ಅಜಾಗ್ರತೆಯಿಂದಾಗಿ ಬೆಂಕಿ ಹೊತ್ತಿಕೊಂಡರೆ ಎಲ್ಲಿಯಾದರೂ ಇಂತಹ ತಂತ್ರಗಳು ಫಲಪ್ರದವಾಗಬಹುದು. ರಕ್ಷಣೆ ಹೊಂದಬಹುದು.

ಆದರೆ ಸಿಲಿಂಡರ್ ಹಳೆಯದಾಗಿದ್ದರೆ ಅಥವಾ ಸಿಲಿಂಡರ್ ನಲ್ಲಿಯೇ ಲೋಪ ದೋಷವಿದ್ದರೆ ಅಪಾಯದಿಂದ ಪಾರಾಗಲು ಯಾವ ಉಪಾಯವೂ ಫಲಿಸದು ಎಂಬುದಕ್ಕೆ ಮಂಗಳೂರಿನ ಮನೆಯೊಂದರಲ್ಲಿ ಕೆಲವು ದಿನಗಳ ಹಿಂದೆ ನಡೆದ ಘಟನೆಯೇ ಸಾಕ್ಷಿ. ಸಿಲಿಂಡರ್ ನ ಲೋಪ ದೋಷದಿಂದಾಗಿ ಬ್ಲಾಕ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಮನೆಯವರ ಬುದ್ದಿವಂತಿಕೆಯಿಂದ ಅಪಾರವಾದ ನಾಶನಷ್ಟ ಸಂಭವಿಸಿಲ್ಲ.

ಗ್ಯಾಸ್ ಸಿಲಿಂಡರ್ ನ ಲೋಪದೋಷದಿಂದ ಆಗುವ ಅನಾಹುತ ಸಣ್ಣದೇನಲ್ಲ. ಈ ಬಗ್ಗೆ ನಿರ್ಲಕ್ಷ್ಯ ಪ್ರಾಣಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಯೇ ಹೆಚ್ಚು. ಮುಂದೆ ಇಂತಹ ಅನಾಹುತಗಳು ಸಂಭವಿಸದಂತೆ ಎಲ್ಲ ಸಿಲಿಂಡರ್ ಗಳು ಸುರಕ್ಷಿತವೇ ಎಂಬುದನ್ನು ಪರಿಶೀಲಿಸಬೇಕು. ಬಾತ್ ರೂಮ್ ನಲ್ಲಿ ಗೀಸರ್ ಗೆ ಸಿಲಿಂಡರ್ ಬಳಸುವ ಕಾರಣ ನೀರು ತಾಗುವುದರಿಂದ ಸಿಲಿಂಡರ್ ಹಾಳಾಗುವ ಸಂಭವವಿರುತ್ತದೆ. ಈ ಬಗ್ಗೆ ಗಮನಹರಿಸಿ ಇತರರ ಪ್ರಾಣಕ್ಕೆ ಅಪಾಯವಾಗದಂತೆ ಎಚ್ಚರಿಕೆ ವಹಿಬೇಕಾಗಿದೆ.

ಗ್ಯಾಸ್ ಏಜೆನ್ಸಿಗಳು ಸಿಲಿಂಡರ್ ಬಗ್ಗೆ ಸರಕಾರಕ್ಕೆ ಸುರಕ್ಷತಾ ಪ್ರಮಾಣ ಪತ್ರ ಒದಗಿಸುವಂತಾಗಲಿ. ಇಲ್ಲದಿದ್ದರೆ ಲೋಪದೋಷವಿರುವ ಸಿಲಿಂಡರ್ ಏಜೆನ್ಸಿಗಳ ಬಗ್ಗೆ ಸರಕಾರ ಕ್ರಮ ಜರಗಿಸಲಿ. ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಲಿ. ಹೊಸ ಸಿಲಿಂಡರ್ ಗಳು ಜನರಿಗೆ ತಲುಪುವಂತಾಗಲಿ.