ಇಸ್ಲಾಮೊಫೋಬಿಯ ಒಂದು ರೀತಿಯ ಜನಾಂಗೀಯವಾದ: ಇಂಗ್ಲೆಂಡ್ ಪಾರ್ಲಿಮೆಂಟ್

0
555

ಲಂಡನ್: ಇಸ್ಲಾಮೊಫೋಬಿಯ(ಇಸ್ಲಾಮ್ ಭೀತಿ) ಒಂದು ರೀತಿಯ ವಂಶೀಯವಾದವಾಗಿದೆ ಎಂದು ಬ್ರಿಟಿಶ್ ಪಾರ್ಲಿಮೆಂಟ್ ಹೇಳಿದೆ.  ಬ್ರಿಟನ್‍ನಾದ್ಯಂತ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಜನಾಂಗೀಯತಾ ವಾದದ ಭಾಗವಾಗಿದೆ ಎಂದು ಬ್ರಿಟಿಷ್ ಪಾರ್ಲಿಮೆಂಟು ಸಮಿತಿ ಇತ್ತೀಚೆಗೆ ಹೊರಡಿಸಿದ ವರದಿಯಲ್ಲಿ ವಿವರಿಸಿದೆ.

ಬ್ರಿಟಿಷ್ ಪಾರ್ಲಿಮೆಂಟರಿ ತಂಡದ ಎಲ್ಲ ಪಾರ್ಟಿಗಳಿದ್ದ ಐಎಪಿಜಿ ಗ್ರೂಪ್ ವರದಿಯನ್ನು ಬಿಡುಗಡೆಗೊಳಿಸಿದ್ದು ಎರಡು ವರ್ಷಗಳಿಂದ  ವ್ಯತ್ಯಸ್ತ ಗುಂಪು ಮತ್ತು ವ್ಯಕ್ತಿಗಳೊಂದಿಗೆ ಚರ್ಚೆಗಳು, ಸಮಾಲೋಚನೆಗಳು ಮಾಡಿದ ಬಳಿಕ ವರದಿಯನ್ನು ಅದು ತಯಾರಿಸಿದೆ. ಇಂತಹ ವಂಶೀಯತೆಯ ಪ್ರಭಾವ ವೈಯಕ್ತಿಕ ವರ್ತನೆಗಳಲ್ಲಿ, ಸಂಸ್ಥೆಯ ಚಟುವಟಿಕೆಗಳಲ್ಲಿ ಕಾಣಿಸುತ್ತಿದೆ. ಹಿಜಾಬ್ ಧರಿಸಿದ ಹೆಸರಿನಲ್ಲಿ ಹಲವು  ಮುಸ್ಲಿಮ್ ಮಹಿಳೆಯರಿಗೆ ಕೆಲಸ ನಿರಾಕರಿಸುವುದು, ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಮುಸ್ಲಿಮ್ ಮಹಿಳೆಯರಿಗೆ ಪ್ರವೇಶ ನೀಡದಿರುವುದು ಇದಕ್ಕೆ ಉದಾಹರಣೆಯೆಂದು ಸಮಿತಿ ಹೇಳಿದೆ.