ಫೆಲೆಸ್ತೀನ್ ನಲ್ಲಿ ಚುನಾವಣಾ ನಡೆದರೆ ಹಮಾಸ್ ಜಯಗಳಿಸಿದೆ; ಇಸ್ರೇಲ್ ಪತ್ರಿಕೆ ಹಯೋಮ್ ವರದಿ

0
625

ಸನ್ಮಾರ್ಗ ವಾರ್ತೆ-

ಗಾಝ; ಅ. 21- ಇಸ್ರೇಲ್, ಜೋರ್ಡಾನ್ ಮತ್ತು ಫೆಲೆಸ್ತೀನ್ ಸರ್ವೇ ತಜ್ಞರ ಪ್ರಕಾರ ಒಂದುವೇಳೆ ಚುನಾವಣೆ ನಡೆದರೆ ಶಾಸಕಾಂಗ ಹಮಾಸ್ ಜಯಗಳಿಸಲಿದೆ ಎಂದು ಹೀಬ್ರೂ ಪತ್ರಿಕೆ ಇಸ್ರೇಲ್ ಹಯೋಮ್ ವರದಿ ಮಾಡಿದೆ ಎಂದು ಮೆಮೊ ಮಿಡ್ಲ್ ಈಸ್ಟ್ ಮೊನಿಟರ್ ಪತ್ರಿಕೆ ವರದಿ ಮಾಡಿದೆ. ಫೆಲೆಸ್ತೀನ್ ಮಾಹಿತಿ ಕೇಂದ್ರದ ಪ್ರಕಾರ, ಶಾಸಕಾಂಗ ಚುನಾವಣೆಗಳು ನಡೆದರೆ, ಫತಾಹ್ ವಿರುದ್ಧ ಹಮಾಸ್ ಜಯಗಳಿಸಿದೆ ಮತ್ತು ಇದು ಹಮಾಸ್ ಆಡಳಿತವನ್ನು ಬಲಪಡಿಸಲು ಕಾರಣವಾಗಲಿದೆ ಎಂದು ಫೆಲೆಸ್ತೀನ್ ಪ್ರಾಧಿಕಾರದ ಅಧ್ಯಕ್ಷ ಅಬ್ಬಾಸ್ ಹೇಳಿರುವುದಾಗಿ ಈ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಫೆಲೆಸ್ತೀನ್ ನಲ್ಲಿ ಇತ್ತೀಚಿಗೆ ನಡೆಸಲಾದ ಹಲವು ಜನಮತ ಸಂಗ್ರಹಗಳ ಪ್ರಕಾರ, ನಿಜವಾಗಿ ಚುನಾವಣಾ ನಡೆದರೆ ಫತಾಹ್ ವಿರುದ್ಧ ಹಮಾಸ್ ವಿರುದ್ಧ ಗೆಲ್ಲುತ್ತದೆ ಮತ್ತು ಹಮಾಸ್ ನ ಇಸ್ಮಾಯಿಲ್ ಹನಿಯ್ಯ ಅವರು ಅಬ್ಬಾಸ್ ಅವರನ್ನು ಸೋಲಿಸುತ್ತಾರೆ ಎಂದು ಹೇಳಲಾಗಿದೆ.

ಜನವರಿ 2005 ರಲ್ಲಿ ಯಾಸರ್ ಅರಾಫತ್ ಅವರ ಮರಣದ ನಂತರ ಅಬ್ಬಾಸ್ ಅವರು ಫೆಲೆಸ್ತೀನ್ ಅಧ್ಯಕ್ಷರಾಗಿ ಆಯ್ಕೆಯಾದರು. 2006 ರ ಚುನಾವಣೆಯಲ್ಲಿ ಸೋತರೂ ಹಮಾಸ್ ನಿಂದಾಗಿ ಅಧ್ಯಕ್ಷರಾಗಿ ಮುಂದುವರಿದರು. ಇದೇ ಸೆಪ್ಟೆಂಬರ್ ಕೊನೆಯಲ್ಲಿ ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದಲ್ಲಿ, ವೆಸ್ಟ್ ಬ್ಯಾಂಕ್, ಗಾಜಾ ಮತ್ತು ಜೆರುಸಲೆಮ್ ನಲ್ಲಿ ಸಾರ್ವತ್ರಿಕ ಚುನಾವಣೆಗೆ ಕರೆ ನೀಡುವುದಾಗಿ ಅಬ್ಬಾಸ್ ಹೇಳಿದ್ದರು.