ಕೇರಳ ಭಾರೀ ಮಳೆ: ಎಲ್ಲ ಪ್ಯಾಸೆಂಜರ್ ರೈಲು ರದ್ದು

0
725

ಸನ್ಮಾರ್ಗ ವಾರ್ತೆ

ಕೊಚ್ಚಿ,ಅ.21:ಭಾರೀ ಮಳೆಯ ಪರಿಣಾಮವಾಗಿ ತಿರುವನಂತಪುರಂ ವಿಭಾಗದ ಎಲ್ಲ ಪ್ಯಾಸೆಂಜರ್ ರೈಲು ರದ್ದಾಗಿದೆ. ಪಿರವಂ-ವೈಕಂ ರೂಟ್‍ನಲ್ಲಿ ಮಣ್ಣು ಕುಸಿತವಾಗಿದೆ. ನಂತರ ಎರ್ನಾಕುಳಂ-ಕಾಯಕ್ಕುಳಂ ರೂಟ್‍ನ ಎಲ್ಲ ಪ್ಯಾಸೆಂಜರ್ ರೈಲುಗಳು ರದ್ದಾದವು.ವರ್‍ನಾಡ್ ಎಕ್ಸ್‌ಪ್ರೆಸ್ ಎರ್ನಾಕುಳಂ ಉತ್ತರ ಮೂಲಕ ಕಳುಹಿಸಿ ಕೊಡಲಾಯಿತು. ದೂರ ಸಂಚಾರದ ರೈಲು ಗಂಟೆ ತಡವಾಗಿ ಓಡಾಟ ನಡೆಸಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.

12076 ಜನಶತಾಬ್ಧಿ ರೈಲು ಆಲಪ್ಪುಝದಲ್ಲಿ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. 16127 ಗುರುವಾಯೂರ್ ಎಕ್ಸ್‌ಪ್ರೆಸ್ ಎರ್ನಾಕುಳಂ ಜಂಕ್ಷನ್‍ನಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು ಇದಲ್ಲದೆ 12678 ಬೆಂಗಳೂರು ಇಂಟರ್‌ಸಿಟಿ, ಎರ್ನಾಕುಳಂ ಜಂಕ್ಷನ್‍ನಿಂದ ಹೊರಡುವ ಸಮಯವನ್ನು 11:30ಕ್ಕೆ ಮರುನಿಗದಿಗೊಳಿಸಲಾಯಿತು. 12617 ಮಂಗಳಾ ಎಕ್ಸ್‌ಪ್ರೆಸ್ ಹೊರಡುವ ಸಮಯದಲ್ಲಿ ಒಂದು ಗಂಟೆ ತಡವಾಗಲಿದೆ ಎಂದು ರೈಲ್ವೆ ಅಧಿಕಾರಗಳು ತಿಳಿಸಿದರು.