ಸನ್ಮರ್ಗ ವಾರ್ತೆ
ಬೀಜಿಂಗ್: ಚೀನಾ-ಅಮೇರಿಕಾ ವಿವಾದವು ಮುಂದುವರಿಯುತ್ತಿರುವ ವೇಳೆಯಲ್ಲಿ ಅಮೇರಿಕಾದ ಯುದ್ಧ ವಿಮಾನಗಳು ರವಿವಾರ ಮತ್ತು ಸೋಮವಾರ ಚೀನಾದ ಪ್ರಮುಖ ನಗರ ಶಾಂಗೈ ಸಮೀಪದಲ್ಲಿ ಹಾರಾಟ ನಡೆಸಿದ್ದು, ವ್ಯಾಪಕ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ತಾಯ್ವಾನ್ ಜಲಸಂಧಿಯಿಂದ ಹೊರಟ ವಿಮಾನಗಳು ಚಿಜಾಂದ್, ಪುಜಿಯಾನ್ ತೀರಗಳಲ್ಲಿ ಹಾರಾಡಿದ್ದು, ಪಿ-8 ಎ ಯುದ್ಧ ವಿಮಾನ ಶಾಮದ್ಹಾಯ್ಗೆ 76.5 ಕಿಲೊಮೀಟರ್ ಸಮೀಪದಲ್ಲಿ ಹಾರಾಡಿದೆ.
ಇತ್ತೀಚೆಗಿನ ವರ್ಷಗಳಲ್ಲಿ ಇಷ್ಟು ಹತ್ತಿರದಿಂದ ಅಮೆರಿಕ ಯುದ್ಧ ವಿಮಾನಗಳು ಹಾರಿಲ್ಲ. ನಿರಂತರ 12ನೆ ದಿವಸ ಅಮೆರಿಕ ಯುದ್ಧ ವಿಮಾನಗಳು ಚೀನದ ತೀರದಲ್ಲಿ ಹಾರಾಟ ಮಾಡಿವೆ.
ಇದೇ ವೇಳೆ,ಹ್ಯೂಸ್ಟನ್ನ ಚೀನದ ಕಾನ್ಸುಲೇಟನ್ನು ಅಮೆರಿಕ ಬಂದ್ ಮಾಡಿದ್ದಕ್ಕೆ ಪ್ರತಿಯಾಗಿ ಚೀನ ಚಾಂದ್ಡುನ ಅಮೆರಿಕದ ಕಾನ್ಸುಲೇಟ್ ಮುಚ್ಚಿದೆ.
ಚೀನಾ ಸರಕಾರದ ಸೂಚನೆಯ ಪ್ರಕಾರ ಸೋಮವಾರ ಬೆಳಗ್ಗೆ ಕಾನ್ಸುಲೇಟ್ಗೆ ಬೀಗಹಾಕಿ ಅಮೆರಿಕದ ಧ್ವಜವನ್ನು ಅರ್ಧಕ್ಕೆ ಮಾಡಿ ಇಳಿಸಲಾಗಿದ್ದು, ಕಾನ್ಸುಲೇಟಿನ ಮುಂದಿನ ಭಾಗದಿಂದ ಅಧಿಕಾರಿಗಳು ಬಂದು ಕಟ್ಟಡವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಚೀನದ ವಿದೇಶ ಸಚಿವಾಲಯವು ಪತ್ರಿಕಾ ಹೇಳಿಕೆ ನೀಡಿ ತಿಳಿಸಿದೆ.
ಬೇಹುಗಾರಿಕೆಯ ಆರೋಪ ಹೊರಿಸಿ ಅಮೆರಿಕಾವು ಚೀನದ ಹ್ಯೂಸ್ಟನ್ ಕಾನ್ಸುಲೇಟ್ ಅನ್ನು ಬಂದ್ ಮಾಡಿಸಿತ್ತು. ಚೀನದ ಕಮ್ಯುನಿಸ್ಟ್ ಪಾರ್ಟಿ ಕ್ರಮ ನಿರಾಶಾದಾಯಕವಾಗಿದೆ ಎಂದು ಅಮೆರಿಕ ಹೇಳಿದೆ. 150 ಸ್ಥಳೀಯರ ಸಹಿತ 200 ಉದ್ಯೋಗಿಗಳಿದ್ದ ಚಂದ್ಡು ಕಾನ್ಸುಲೇಟ್ ಮುಚ್ಚಿಸುವ ಪ್ರಕ್ರಿಯೆ ನೋಡಲು ಬಿಗಿ ಬಂದೋಬಸ್ತಿನಲ್ಲಿ ಅಪಾರ ಜನಸಂದಣಿ ನೆರೆದಿತ್ತು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ.
ಓದಿಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












