ಫೆಲಸ್ತೀನಿಯರ ಮೇಲೆ ಮುಂದುವರಿದ ಇಸ್ರೇಲ್ ಸೇನಾ ದಬ್ಬಾಳಿಕೆ: ಗ್ರಾಮಗಳನ್ನೇ ಖಾಲಿ ಮಾಡಲು ಸೇನೆಯಿಂದ ಹುನ್ನಾರ

0
45

ಸನ್ಮಾರ್ಗ ವಾರ್ತೆ

ರಮಲ್ಲಾ: ಇಸ್ರೇಲಿ ಸಶಸ್ತ್ರ ಪಡೆಗಳ ಅಧಿಕಾರಿಗಳು ಇಸ್ರೇಲಿ ಸರ್ಕಾರದ ಅರಿವಿಲ್ಲದೆ ಫೆಲಸ್ತೀನಿಯರನ್ನು ಬಲವಂತವಾಗಿ ಸ್ಥಳಾಂತರಿಸಲು ಯತ್ನಿಸುತ್ತಿದೆ ಎಂಬುದಾಗಿ ವರದಿಯಾಗಿದೆ. ದಕ್ಷಿಣ ವೆಸ್ಟ್ ಬ್ಯಾಂಕ್‌ನ ದಕ್ಷಿಣ ಹೆಬ್ರಾನ್ ಬಳಿಯ ಮಸಾಫರ್ ಯಟ್ಟಾದಲ್ಲಿನ ಹಳ್ಳಿಯಿಂದ ಸಾವಿರಾರು ಫೆಲಸ್ತೀನಿಯರನ್ನು ಬಲವಂತವಾಗಿ ಸ್ಥಳಾಂತರಿಸಲು ಯೋಜಿಸುತ್ತಿದ್ದಾರೆ ಎಂದು ಇಸ್ರೇಲಿ ಮೂಲಗಳು ತಿಳಿಸಿವೆ ಎಂದು ಅರಬ್ ನ್ಯೂಸ್ ವರದಿ ಮಾಡಿದೆ.

ಸೇನೆಯ ಸೆಂಟ್ರಲ್ ಡಿಸ್ಟ್ರಿಕ್ಟ್ ಕಮಾಂಡ್ ಫೆಲಸ್ತೀನಿಯನ್ ನಿವಾಸಿಗಳನ್ನು ಬಲವಂತವಾಗಿ ಸ್ಥಳಾಂತರಿಸಲು ಕಳೆದ ನವೆಂಬರ್‌ನಲ್ಲಿ ಕಾರ್ಯಗತವಾಗಿದ್ದು, ಮಿಲಿಟರಿಯು ಈ ಪ್ರದೇಶದಲ್ಲಿ ತರಬೇತಿ ವ್ಯಾಯಾಮಗಳನ್ನು ನಡೆಸಲು ಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಕಳೆದ ನವೆಂಬರ್‌ನಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದ್ದು ಹೊಸ ಸರ್ಕಾರ ಬಂದ ಮೇಲೆ ಈ ಯೋಜನೆಯನ್ನು ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ವಿಷಯವನ್ನು ಫೆಲೆಸ್ತೀನಿ ಅಥಾರಿಟಿಯ ಅಧಿಕಾರಿಗಳು ಈಗಾಗಲೇ ದೃಢಪಡಿಸಿದ್ದು, ಇಸ್ರೇಲ್‌ನ ನಾಗರಿಕ ಆಡಳಿತ ವಿಭಾಗವು ಒಟ್ಟು 12 ಗ್ರಾಮಗಳಿಂದ ಫೆಲೆಸ್ತೀನಿಯರನ್ನು ತೆರವುಗೊಳಿಸುವ ಯೋಜನೆಯನ್ನು ಹಾಕಿಕೊಂಡಿರುವುದಾಗಿ ಹೇಳಿದೆ.

LEAVE A REPLY

Please enter your comment!
Please enter your name here