ಸಮುದಾಯದ ನಿಯಮವನ್ನು ಮೀರಿ ವಿವಾಹ: ವಧು-ವರರಿಗೆ ನೊಗವನ್ನು ಕಟ್ಟಿ ಉಳುಮೆ ಮಾಡಿಸಿದರು

0
468

ಸನ್ಮಾರ್ಗ ವಾರ್ತೆ

ಸಮುದಾಯದ ನಿಯಮವನ್ನು ಮೀರಿ ಮದುವೆಯಾದ ದಲಿತ ದಂಪತಿಗಳಿಗೆ ಗದ್ದೆಯಲ್ಲಿ ನೊಗ ಹೊತ್ತು ಉಳುವ ಶಿಕ್ಷೆಯನ್ನು ನೀಡಲಾಗಿದೆ. ಒಡಿಸ್ಸಾದ ಒಂದು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಶಿಕ್ಷೆಯ ವಿಡಿಯೋ ಒಂದು ವಾರದ ಬಳಿಕ ಬಹಿರಂಗಕ್ಕೆ ಬಂದಿದೆ.

ಸುತ್ತಲೂ ನಿಂತವರು ಈ ವಧು ವರರ ಬೆನ್ನಿಗೆ ನೊಗವನ್ನು ಕಟ್ಟಿ ಗದ್ದೆಯನ್ನು ಉಳುವಂತೆ ಬಲವಂತ ಪಡಿಸುವುದು ವಿಡಿಯೋದಲ್ಲಿ ಸೆರೆಯಾಗಿದೆ.

200 ಮಂದಿ ಸದಸ್ಯರಿರುವ ಆದಿವಾಸಿ ವಿಭಾಗವಾದ ಬಂಗಾರಿಯ ಸಮುದಾಯದ ಜನರು ಈ ಕ್ರೂರ ಕೃತ್ಯವನ್ನು ಎಸಗಿದ್ದಾರೆ. ಸಮುದಾಯದ ಮಂದಿ ಮತ್ತು ಕುಟುಂಬ ಈ ವಿವಾಹವನ್ನು ವಿರೋಧಿಸಿದ್ದರು.

ವಧು ಮತ್ತು ವರ ಇಬ್ಬರು ಕೂಡ ಒಂದೇ ಸಮುದಾಯವಾಗಿದ್ದಾರೆ. ಆದರೆ ಇವರಿಬ್ಬರೂ ಹತ್ತಿರದ ಕುಟುಂಬಿಕರಾಗಿರುವುದರಿಂದ ಈ ವಿವಾಹಕ್ಕೆ ಕುಟುಂಬ ಅನುಮತಿಸುತ್ತಿಲ್ಲ. ಒಂದೇ ಕುಲದವರನ್ನು ಸಹೋದರಿಯಾಗಿಯೋ ಅಥವಾ ಸೊಸೆಯಾಗಿಯೋ ಈ ಸಮುದಾಯದಲ್ಲಿ ಗುರುತಿಸಲಾಗುತ್ತದೆ. ಆದ್ದರಿಂದ ಈ ವಿವಾಹ ಸಮುದಾಯ ನಿಯಮಗಳಿಗೆ ವಿರುದ್ಧ ಎಂದು ಹೇಳಿ ಈ ಶಿಕ್ಷೆಯನ್ನು ವಿಧಿಸಲಾಗಿದೆ.