ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್‌ರಿಂದ UAE‌ಗೆ ಅಧಿಕೃತ ಭೇಟಿ; ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಹೆಚ್ಚಿದ ರಾಜಕೀಯ ಕುತೂಹಲ

0
61

ಸನ್ಮಾರ್ಗ ವಾರ್ತೆ

ದುಬೈ: ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಯುಎಇಗೆ ಬಂದಿದ್ದಾರೆ. ರವಿವಾರ ರಾತ್ರೆ ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರನ್ನು ಯುಎಇ ವಿದೇಶ ಸಚಿವ ಶೇಖ್ ಅಬ್ದುಲ್ಲ ಬಿನ್ ಝಿಯಾದ ಸ್ವಾಗತಿಸಿದರು.

ಮೊದಲ ಬಾರಿಗೆ ಅಧಿಕೃತವಾಗಿ ಇಸ್ರೇಲಿನ ಪ್ರಧಾನಿಯೊಬ್ಬರು ಯುನೈಟೆಡ್ ಅರಬ್ ಎಮಿರೇಟ್ಸ್‌ ಗೆ ಭೇಟಿ ನೀಡುತ್ತಿರುವುದು ಈ ಭೇಟಿಯ ವಿಶೇಷತೆಯಾಗಿದೆ. ಇಂದು ಸೋಮವಾರ ಅವರು ಅಬುಧಾಬಿ ರಾಜಕುಮಾರ, ಯುಎಇ ಶಸಸ್ತ್ರ ಸೇನೆಯ ಉಪದಂಡನಾಯಕ ಶೇಖ್ ಮುಹಮ್ಮದ್ ಬಿನ್ ಝಾಯಿದ್ ಅಲ್ ನೆಹ್ಯಾನ್‍ರನ್ನು ಭೇಟಿಯಾಗಲಿದ್ದಾರೆ.

ಇರಾನ್-ಇಸ್ರೇಲ್ ಸಂಘರ್ಷ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಈ ಭೇಟಿಯನ್ನು ರಾಜಕೀಯ ವಲಯಗಳು ಕುತೂಹಲದಿಂದ ನೋಡುತ್ತಿವೆ. ಎರಡು ದೇಶಗಳು ಯುದ್ಧ ಘೋಷಿಸಿವೆ. ಈ ಪರಿಸ್ಥಿತಿಯಲ್ಲಿ ಘರ್ಷಣೆ ತಪ್ಪಿಸಲು ಇರುವ ಯತ್ನಕ್ಕೆ UAE ಮಧ್ಯಸ್ಥಿಕೆ ವಹಿಸಬಹುದು ಎಂದು ಊಹಿಸಲಾಗಿದೆ. ಯುಎಇ ಸುರಕ್ಷಾ ಸಲಹೆಗಾರ ಶೇಖ್ ತಹ್ನೂನ್ ಬಿನ್ ಝಾಯಿದ್ ಇತ್ತೀಚೆಗೆ ಇರಾನಿಗೆ ತೆರಳಿ ಅಧ್ಯಕ್ಷ ಇಬ್ರಾಹೀಂ ರೌಸಿಯವರನ್ನು ಭೇಟಿಯಾಗಿದ್ದರು.