ಫೆಲೆಸ್ತೀನ್‍‌ನಲ್ಲಿ ಇಸ್ರೇಲ್ ಯುದ್ಧ ವಿಮಾನಗಳ ದಾಳಿ: ನಿರಾಕರಿಸಿದ ಹಮಾಸ್

0
713

ಸನ್ಮಾರ್ಗ ವಾರ್ತೆ

ಗಾಝಸಿಟಿ,ಆ. 27: ಇಸ್ರೇಲಿನ ಯುದ್ಧವಿಮಾನಗಳು ಗಾಝದಲ್ಲಿ ಯುದ್ಧ ವಿಮಾನಗಳ ಮೂಲಕ ದಾಳಿ ನಡೆಸಿದೆ ಎಂದು ಇಸ್ರೇಲಿನ ಸೈನ್ಯದ ಮೂಲಗಳು ತಿಳಿಸಿವೆ. ಇದೇ ವೇಳೆ ಹಮಾಸ್ ವಕ್ತಾರ ಹಾಸಿಂ ಖಾಮ್ ಇಸ್ರೇಲ್ ವಾಯು ದಾಳಿ ಮಾಡಿಲ್ಲ ಎಂದು ಹೇಳಿದ್ದಾರೆ. ಗಾಝಪಟ್ಟಿಯ ಹಮಾಸ್ ಆಡಳಿತ ಪ್ರದೇಶದಲ್ಲಿ ಸೋಮವಾರ ಬೆಳಗ್ಗಿನ ಜಾವ ಇಸ್ರೇಲಿನ ಯುದ್ಧ ವಿಮಾನಗಳು ಬಾಂಬ್ ಸುರಿಸಿದೆ ಎಂದು ಇಸ್ರೇಲ್ ಹೇಳುತ್ತಿದೆ.

ಗಾಝದ ಇಂಧನ ವಿತರಣೆಯನ್ನೂ ರದ್ದುಪಡಿಸಿರುವುದಾಗಿ ಸೇನಾ ಮೂಲಗಳು ಹೇಳಿವೆ. ಈ ಹಿಂದೆ ಫೆಲಸ್ತೀನ್ ಇಸ್ರೇಲ್‍ನ ಮೇಲೆ ರಾಕೆಟ್ ದಾಳಿ ನಡೆಸಿತ್ತು. ಅದಕ್ಕೆ ಉತ್ತರವಾಗಿ ವಾಯುದಾಳಿ ನಡೆಸಿದೆ ಎಂದು ಇಸ್ರೇಲ್ ಹೇಳುತ್ತಿದೆ. ಕಳೆದ ದಿವಸ ರಾತ್ರೆ ಇಸ್ರೇಲಿನ ದಕ್ಷಿಣ ಭಾಗಕ್ಕೆ ಗಾಝದಿಂದ ಮೂರು ರಾಕೆಟ್‍ಗಳು ಬಂದು ಬಡಿದಿದ್ದವು ಎಂದು ಇಸ್ರೇಲ್ ತಿಳಿಸಿದೆ.