ಹಿಂದೂಗಳಿಗೆ ಬಾಬರಿ ಮಸೀದಿ ತೆರೆದು ಕೊಟ್ಟದ್ದು ರಾಜೀವ್ ಗಾಂದಿಯಲ್ಲ: ಮಣಿಶಂಕರ್ ಅಯ್ಯರ್

0
459

ಸನ್ಮಾರ್ಗ ವಾರ್ತೆ

ನವದೆಹಲಿ: ಬಾಬರಿ ಮಸೀದಿಯ ಬಾಗಿಲುಗಳನ್ನು ಹಿಂದೂಗಳಿಗೆ ತೆರೆದು ಕೊಟ್ಟದ್ದು ಪ್ರಧಾನಿ ರಾಜೀವ್ ಗಾಂಧಿಯಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. ಇದರ ಹಿಂದೆ ಬಿಜೆಪಿ ನೇಮಿಸಿದ ಅರುಣ್ ನೆಹರು ಇದ್ದಾರೆ ಎಂದು ಹೇಳಿದರು.

ನರಸಿಂಹರಾವ್ ಬದಲು ರಾಜೀವ್ ಗಾಂಧಿ ಪ್ರಧಾನಿ ಆಗಿದ್ದರೆ ಮಸೀದಿ ಇನ್ನೂ ಇರುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಜನವರಿ 22 ರಂದು ರಾಮ ಮಂದಿರ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸದಿರುವ ಕಾಂಗ್ರೆಸ್ ನಿರ್ಧಾರವನ್ನು ಮಣಿಶಂಕರ್ ಅಯ್ಯರ್ ಶ್ಲಾಘಿಸಿದರು.

‘ದಿ ರಾಜೀವ್-ಐ ನ್ಯೂ ಆ್ಯಂಡ್ ವೈ ಹಿ ವಾಸ್ ಇಂಡಿಯಾಸ್ ಮೋಸ್ಟ್ ಮಿಸ್‌ಅಂಡರ್‌ಸ್ಟಾಂಡ್ ಪ್ರೈಮ್ ಮಿನಿಸ್ಟರ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಮಸೀದಿ ಇರುವಂತೆ ಮಂದಿರ ಕಟ್ಟಬೇಕೆಂದು ರಾಜೀವ್ ಗಾಂಧಿ ಬಯಸಿದ್ದರು. ಕೆಲವು ವರ್ಷಗಳ ಹಿಂದೆ ಸುಪ್ರೀಂಕೋರ್ಟು ಅದೇ ತೀರ್ಮಾನವನ್ನು ಪ್ರಕಟಿಸಿತ್ತು. ರಾಜೀವ್ ಗಾಂಧಿಯ ಅಭಿಮತ ಕೂಡ ಅದಾಗಿತ್ತು. ಎನ್‍ಡಿಎ ಸೋತು ಹತ್ತು ವರ್ಷ ಕಾಂಗ್ರೆಸ್ ಆಳ್ವಿಕೆಯಿತ್ತಲ್ಲ. ಅದರ ಕೊನೆಯಲ್ಲಿ ವಿಷಯ ತುಂಬ ಉಲ್ಟಾಪಲ್ಟಾ ಆಯಿತು. ತೀರ್ಮಾನ ಕೈಗೊಳ್ಳಲು ಸಮರ್ಥರಲ್ಲದ ಒಂದು ಪ್ರಧಾನಿ ಇದ್ದ ಶೂನ್ಯ ಕಾಲದಲ್ಲಿ ಮೋದಿಯ ಬಿಜೆಪಿ ಪ್ರವೇಶಿಸಿದ್ದು ಎಂದು ಅಯ್ಯರ್ ಹೇಳಿದರು.

1986ರಲ್ಲಿ ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಸೀಟುಗಳನ್ನು ರಾಜೀವ್ ಗಾಂಧಿ ಗಳಿಸಿದ್ದರು. ಮುಸ್ಲಿಮರ ಓಲೈಕೆಯೂ ಹಿಂದೂಗಳ ಭಾವನೆಯಿಂದ ಲಾಭ ಎತ್ತುವುದು ಅಗತ್ಯ ಇರಲಿಲ್ಲ. ಲಕ್ನೊದಲ್ಲಿ ಕಲಿತ ವ್ಯಕ್ತಿಯಾದ್ದರಿಂದ ಅಲ್ಲಿನ ಸ್ಥಳೀಯ ಸಮಸ್ಯೆಗಳು ಮಾತ್ರ ಅರುಣ್ ನೆಹರೂರ ಮನದಾಳದಳಿದ್ದದ್ದು ಎಂದು ಮಣಿಶಂಕರ್ ಅಯ್ಯರ್ ಹೇಳಿದರು.

ಅರುಣ್ ನೆಹರೂ ಅವರು ಪಕ್ಷದಲ್ಲಿನ ತಮ್ಮ ಪ್ರಭಾವವನ್ನು ಬಳಸಿಕೊಂಡು ವೀರ್ ಬಹದ್ದೂರ್ ಸಿಂಗ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ವೀರ್ ಬಹದ್ದೂರ್ ಸಿಂಗ್ ಮಾಡಿದ ಮೊದಲ ಕೆಲಸವೆಂದರೆ ಅಯೋಧ್ಯೆಗೆ ಹೋಗಿ ವಿ.ಎಚ್. ಪಿ ನಾಯಕಿ ದೇವಕಿ ನಂದನ್ ಅಗರ್ವಾಲ್ ಅವರನ್ನು ಭೇಟಿಯಾಗಿದ್ದು. ಅಗರ್ವಾಲ್ ನೀಡಿದ ಮನವಿ ಮೇರೆಗೆ ಬೀಗ ತೆರೆದು ಕೊಡಲಾಯಿತು.

ಫೆಬ್ರವರಿ 1, 1986 ರಂದು ಫೈಜಾಬಾದ್‌ನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರ ಮುಂದೆ ವಿಷಯ ಬಂದಾಗ, ಜಿಲ್ಲಾಧಿಕಾರಿ ಮತ್ತು ಹಿರಿಯ ಪೊಲೀಸ್ ಅಧೀಕ್ಷಕರು ಬೀಗಗಳ ಅಗತ್ಯವಿಲ್ಲ ಎಂದು ದೃಢಪಡಿಸಿದರು. ಬೀಗ ತೆರೆದಾಗ ಉದ್ದೇಶಪೂರ್ವಕವಾಗಿ ಒಂದೆಡೆ ಸೇರಿದ್ದ ಹಿಂದೂ ಸನ್ಯಾಸಿಗಳು ಒಳ ಪ್ರವೇಶಿಸಿದರು. ಅದು ರಾಜೀವ್ ಗಾಂಧಿಗೆ ಗೊತ್ತಿರಲಿಲ್ಲ. ರಾಜೀವ್ ಗಾಂಧಿಗೆ ಗೊತ್ತಾದರೆ ಒಪ್ಪುವುದಿಲ್ಲ ಎಂಬ ಖಾತ್ರಿಯಿಂದ ಇದೆಲ್ಲವನ್ನೂ ಮುಚ್ಚಿಡಲಾಯಿತು ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. ಅರುಣ್ ನೆಹರು ಅಂಕಣಕಾರ ಮತ್ತು ಜನತಾದಳದ ನಾಯಕರಾಗಿದ್ದರು. ಅವರು ಕಾಂಗ್ರೆಸ್ ಟಿಕೆಟ್‌ನಲ್ಲಿ ರಾಯ್ ಬರೇಲಿಯಿಂದ ಸಂಸದರಾದರು ಮತ್ತು ನಂತರ ಬಿಜೆಪಿ ಸೇರಿದರು.