ಸನ್ಮಾರ್ಗ ವಾರ್ತೆ
ಮುಂಬೈ,ಅ.27: ಆರ್ಟಿಕಲ್ 370 ಕುರಿತು ಜಮ್ಮು-ಕಾಶ್ಮೀರದ ರಾಜಕೀಯ ನಾಯಕರು ನೀಡಿದ ಹೇಳಿಕೆಯನ್ನು ಶಿವಸೇನೆ ವಕ್ತಾರ ಸಂಜಯ್ ರಾವತ್ ವಿರೋಧಿಸಿದ್ದಾರೆ.
ಚೀನದ ನೆರವಿನೊಂದಿಗೆ ಆರ್ಟಿಕಲ್ 370 ಮರುಸ್ಥಾಪಿಸಲು ಫಾರೂಕ್ ಅಬ್ದುಲ್ಲಾ, ಮೆಹಬೂಬ ಮುಫ್ತಿ ಮುಂದಾಗುವುದಾದರೆ ಕೇಂದ್ರ ಸರಕಾರ ಬಲವಾದ ಕ್ರಮವನ್ನು ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಕಾಶ್ಮೀರದಲ್ಲಿ ಭಾರತದ ಧ್ವಜವನ್ನು ಹಾರಿಸುವುದನ್ನು ಯಾರಾದರೂ ತಡೆಯುವುದಾದರೆ ಅದು ದೇಶದ್ರೋಹವೆಂದು ತಿಳಿಯುತ್ತೇನೆಂದು ರಾವತ್ ಹೇಳಿದರು. ಬಿಜೆಪಿ ಮತ್ತು ಕೇಂದ್ರ ಸರಕಾರವನ್ನು ಟೀಕಿಸಿದರೂ ಶಿವಸೇನೆ ಮತ್ತು ರಾವುತ್ ಕಾಶ್ಮೀರ ವಿಷಯದಲ್ಲಿ ಪ್ರತಿಪಕ್ಷಳ ನಿಲುವಿನ ವಿರುದ್ಧವಾಗಿದ್ದಾರೆ ಎಂಬುದನ್ನು ಇದು ಸೂಚಿಸುತ್ತಿದೆ.
ಲಡಾಕ್ನಲ್ಲಿ ಚೀನದ ಅತಿಕ್ರಮಣದ ಕಾರಣದಿಂದ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಲಾಯಿತೆಂದು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದರು. ಆರ್ಟಿಕಲ್ 370 ರದ್ದು ಮಾಡಿದ್ದನ್ನು ಚೀನ ಯಾವತ್ತು ಒಪ್ಪದು. ರದ್ದು ಪಡಿಸಿದ ಸ್ಥಾನಮಾನವನ್ನು ಚೀನದ ಬೆಂಬಲದೊಂದಿಗೆ ಮರುಸ್ಥಾಪಿಸುವ ವಿಶ್ವಾಸ ಇದೆ ಎಂದೂ ಅವರು ಹೇಳಿದ್ದರು.












