ಗಿನ್ನೆಸ್ ವಿಶ್ವ ದಾಖಲೆ ಬರೆದ ಜಿದ್ದಾ‌ ‘ಸೂಪರ್‌‌ಡೋಮ್’

0
218

ಸನ್ಮಾರ್ಗ ವಾರ್ತೆ

ಜಿದ್ದಾ: ಅಂತಾರಾಷ್ಟ್ರೀಯ ಸಭೆ, ಸಮ್ಮೇಳನಗಳಿಗಾಗಿ ಗಮನ ಸೆಳೆದಿರುವ ಜಿದ್ದಾದ ಸೂಪರ್ ಡೋಮ್ ಗಿನ್ನೆಸ್ ವಿಶ್ವ ದಾಖಲೆ ಬರೆದಿದೆ. ಗಿನ್ನೆಸ್ ಬುಕ್ 2023ರ ಪ್ರತಿಯಲ್ಲಿ ಜಿದ್ದಾ ಸೂಪರ್ ಡೋಮ್ ಸೇರ್ಪಡೆಯಾಗಿದ್ದು, ಜಗತ್ತಿನ ಅತ್ಯಂತ ದೊಡ್ಡ ಗುಮ್ಮಟ ಹೊಂದಿರುವ ಖ್ಯಾತಿಗೆ ಪಾತ್ರವಾಗಿದೆ‌.

210 ಮೀಟರ್ ವ್ಯಾಸ ಮತ್ತು 300 ಟನ್‌ಗಿಂತಲೂ ಹೆಚ್ಚು ಉಕ್ಕಿನಿಂದ ನಿರ್ಮಿತ ಜಿದ್ದಾ ಸೂಪರ್‌ಡೋಮ್ ಸೌದಿಯ ಮಹತ್ವಾಕಾಂಕ್ಷೆಯ ಪರಿವರ್ತನೆಗೆ ಸಾಕ್ಷಿಯಾಗಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಅನೇಕ ಸವಾಲುಗಳ ನಡುವೆಯೂ ಇದನ್ನು ಎರಡು ವರ್ಷಗಳ ಒಳಗೆ ನಿರ್ಮಿಸುವ ಮೂಲಕ ಅನಾವರಣಗೊಳಿಸಲಾಗಿದೆ ಎಂಬ ಅಂಶವು ಅದನ್ನು ಇನ್ನಷ್ಟು ಗಮನಾರ್ಹಗೊಳಿಸಿದೆ.

ವಿಸ್ತಾರ ಮೇಲ್ಛಾವಣಿ ಹೊಂದಿರುವುದು ಮಾತ್ರವಲ್ಲದೇ ಪ್ರತಿಯೊಂದು ಕಾರ್ಯಕ್ರಮಕ್ಕೆ ಬೇಕಾದಂತಹ ರೂಪದಲ್ಲಿ ಡೋಮ್‍ನಲ್ಲಿ ಬದಲಾವಣೆ ಮಾಡಬಹುದು ಎಂಬುದು ಇದರ ಇನ್ನೊಂದು ಆಕರ್ಷಣೆ. 39,753 ಮೀಟರ್‌‌ಗೆ ಸಮಾನವಾದ ಆಂತರಿಕ ವಿಸ್ತೀರ್ಣವನ್ನು ಹೊಂದಿದ್ದು, ಡೋಮ್‌ನ ಎತ್ತರ ಸುಮಾರು 46 ಮೀಟರ್ ಆಗಿದೆ.