ಗೋವಾದಲ್ಲಿ ತೂಗು ಸೇತುವೆ ಕುಸಿತ; 40 ಪ್ರವಾಸಿಗರ ರಕ್ಷಣೆ

0
173

ಸನ್ಮಾರ್ಗ ವಾರ್ತೆ

ಪಣಜಿ: ಗೋವಾದ ದೂದ್ ಸಾಗರ್ ಜಲಪಾತದ ಬಳಿ ತೂಗು ಸೇತುವೆ ಕುಸಿದಿದೆ. ಶುಕ್ರವಾರ ಸಂಜೆ ಗೋವಾ-ಕರ್ನಾಟಕ ಗಡಿಯಲ್ಲಿ ಈ ಅವಘಡ ಸಂಭವಿಸಿದ್ದು, 40 ಪ್ರವಾಸಿಗರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವರದಿಗಳ ಪ್ರಕಾರ ಭಾರೀ ಮಳೆಯಿಂದಾಗಿ ನೀರಿನ ಮಟ್ಟ ಹೆಚ್ಚಾಗಿದ್ದು ಪ್ರವಾಸಿಗರು ತೂಗು ಸೇತುವೆ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಸೇತುವೆ ಕುಸಿದಿರುವುದಾಗಿ ವರದಿಯಾಗಿದೆ.

ಭಾರೀ ಮಳೆಯಿಂದ ತೂಗು ಸೇತುವ ಕುಸಿದ ನಂತರ ದೂದ್ ಸಾಗರ್ ಜಲಪಾತದಲ್ಲಿ ಸಿಕ್ಕಿಬಿದ್ದ 40 ಪ್ರವಾಸಿಗರನ್ನು ‘ರಿವರ್ ಲೈಫ್‍ ಸೇವರ್ಸ್’ ತಂಡ ರಕ್ಷಿಸಿದೆ. ಪ್ರವಾಸಿಗರನ್ನು ರಕ್ಷಿಸಿದ ತಂಡಕ್ಕೆ ಪ್ರವಾಸಿಗರು ಕೃತಜ್ಞತೆ ಹೇಳಿದ್ದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಟ್ವೀಟ್ ಮೂಲಕ ರಕ್ಷಣಾ ತಂಡವನ್ನು ಅಭಿನಂದಿಸಿದ್ದಾರೆ.

ಭಾರೀ ಮಳೆಯಿಂದ ನೀರಿನ ಮಟ್ಟ ಹೆಚ್ಚಿದ್ದು, ಈ ಪರಿಸ್ಥಿತಿಯಲ್ಲಿ ಪ್ರವಾಸಿಗರಿಗೆ ನಿಯಂತ್ರಣ ಹೇರಲಾಗಿದೆ.