ಸನ್ಮಾರ್ಗ ವಾರ್ತೆ
ರಾಂಚಿ,ಮೇ.28: ರೇಷನ್ ಕಾರ್ಡ್ ಇಲ್ಲದ್ದರಿಂದ ಆಹಾರ ವಸ್ತು ಸಿಗದೆ ಹಸಿವಿನಿಂದ ಐದು ವರ್ಷದ ತಮ್ಮ ಹೆಣ್ಣು ಮಗು ಮೃತಪಟ್ಟಿದೆ ಎಂದು ತಂದೆ-ತಾಯಿ ಹೇಳಿದ್ದನ್ನು ಝಾರ್ಕಡಿಂನ ಸರಕಾರ ಒಪ್ಪಿಲ್ಲ. ಲತೇಹಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ನಾಲ್ಕೈದು ದಿವಸ ಆಹಾರ ಇಲ್ಲದ್ದರಿಂದ ಐದು ವರ್ಷದ ಮಗು ನಿಮಾನಿ ಮೃತಪಟ್ಟಳು ಎಂದು ತಂದೆ ತಾಯಿ ಹೇಳುತ್ತಿದ್ದಾರೆ.
ಕುಟುಂಬಕ್ಕೆ ರೇಷನ್ ಕಾರ್ಡಿಲ್ಲ. ಆದ್ದರಿಂದ ಜಿಲ್ಲಾಡಳಿತ ಪಡಿತರ ಕೊಡಲಿಲ್ಲ. ಆಹಾರ ಇಲ್ಲದೆ ನಿಮಾನಿ ಮೃತಪಟ್ಟಳು ಎಂದು ಕುಟುಂಬ ಹೇಳುತ್ತಿದೆ. ನಿಮಾನಿ ಮೃತಪಟ್ಟಂದು ರಾತ್ರೆಯಲ್ಲಿ ಡೆಪ್ಯುಟಿ ಜಿಲ್ಲಾ ಕಮಿಶನರ್ ಮನೆಗೆ ಪಡಿತರವನ್ನು ತಂದು ಕೊಟ್ಟರೆಂದು ಕುಟುಂಬ ಹೇಳುತ್ತಿದೆ.
ಆದರೆ ಸ್ಥಳೀಯ ಅಧಿಕಾರಿಗಳು ಇದನ್ನು ಒಪ್ಪಿಲ್ಲ ನಿಮಾನಿಯ ಕುಟುಂಬಕ್ಕೆ ರೇಶನ್ ಕೊಟ್ಟಿದ್ದೇವೆ.ನಮ್ಮ ಮೇಲೆ ಹೊರಿಸಿದ ಆರೋಪ ನಿರಾಧಾರವಾದದ್ದು ಎಂದು ಬಿಡಿಒ ಹೇಳುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ನೆರೆಯ ಮನೆಯ ನಿವಾಸಿಗಳ ನೇತೃತ್ವದಲ್ಲಿ ಹಣ ಸಂಗ್ರಹಿಸಿ ನಿಮಾನಿ ಕುಟುಂಬಕ್ಕೆ ಆಹಾರ ವಸ್ತುಗಳನ್ನು ತಂದು ಕೊಡಲಾಯಿತು. ಮಾತ್ರವಲ್ಲ, ಜಿಲ್ಲಾಡಳಿತದ ರೇಶನ್ ಅಂಗಡಿಯ ಮೂಲಕವೂ ಹೆಚ್ಚು ಆಹಾರ ಧಾನ್ಯವನ್ನು ಇವರಿಗೆ ನೀಡಲಾಯಿತೆಂದು ಬಿಡಿಒ ಹೇಳಿಕೊಂಡಿದ್ದಾರೆ.
ಮಗುವಿನ ಸಾವಿಗೆ ಕಾರಣ ಬೇರೇನೋ ಇರಬಹುದು ಎಂದು ಸ್ಥಳೀಯಾಡಳಿತ ಆರೋಪಿಸಿದೆ. ಮಗುವಿನ ಮೆಡಿಕಲ್ ಚೆಕಪ್ ವರದಿ ಇದುವರೆಗೆ ಹೊರಬಂದಿಲ್ಲ. ಮಗು ಅಂದು ಆಹಾರ ಸೇವಿಸಿತ್ತು. ಬಿಸಿಲಲಿ ಹೋಗಿ ಬಂದ ಬಳಿಕ ತಲೆ ನೋವು ಬಂದಿತ್ತು, ಇದರ ನಂತರ ಮಗು ಮೃತಪಟ್ಟದ್ದೆಂದು ಸ್ಥಳೀಯ ಅಧಿಕಾರಿಗಳು ಹೇಳುತ್ತಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನಜ ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












