ಕೊರೋನದಿಂದ ಗುಣಮುಖವಾದ 36 ದಿನಗಳ ಮಗು; ಚಪ್ಪಾಳೆ ತಟ್ಟಿ ಬೀಳ್ಕೊಟ್ಟ ಆಸ್ಪತ್ರೆಯ ಸಿಬ್ಬಂದಿಗಳು-ವೀಡಿಯೊ

0
909

ಸನ್ಮಾರ್ಗ ವಾರ್ತೆ

ಮುಂಬೈ,ಮೇ.28: ಮಹಾರಾಷ್ಟ್ರದಲ್ಲಿ 36 ದಿವಸವಾಗಿದ್ದ ಮಗು ಕೊರೋನದಿಂದ ಚೇತರಿಸಿಕೊಂಡಿದ್ದು ಆಸ್ಪತ್ರೆಯ ಸಿಬ್ಬಂದಿಗಳು ಕೈಚಪ್ಪಾಳೆಯಿಂದ ಶುಭಾಶಯ ಕೋರಿ ಮಗುವನ್ನು ಬೀಳ್ಕೊಟ್ಟಿದ್ದಾರೆ.

ಮುಂಬೈ ಸಿಯೊನ್ ಆಸ್ಪತ್ರೆಯಲ್ಲಿ ಕೊರೋನಾ ಪೀಡಿತ ಮಗು ಕೊರೋನದಿಂದ ಮುಕ್ತಗೊಂಡಿದೆ. ವೈದ್ಯರು ನರ್ಸ್‌ಗಳು ತಾಯಿ-ಮಗುವಿಗೆ ಶುಭಾಶಯ ಕೋರಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಅಧಿಕೃತ ಟ್ವಿಟರ್ ಹ್ಯಾಂಡಲ್‍ನಲ್ಲಿ ಮಗುವಿಗೆ ಶುಭಾಶಯ ಕೋರುತ್ತಿರುವ ದೃಶ್ಯಗಳು ಹಂಚಲಾಗಿದೆ.

ಕೊರೋನ ವಿರುದ್ಧದ ಹೋರಾಟಕ್ಕೆ ಮಹಾರಾಷ್ಟ್ರದ ಜನರಿಗೆ ವಯಸ್ಸು ಅಡ್ಡಿಯಲ್ಲ. ಮುಂಬೈ ಸಿಯೊನ್ ಆಸ್ಪತ್ರೆಯಲ್ಲಿ 36 ದಿವಸದ ಮಗು ಕೊರೋನ ಮುಕ್ತವಾಗಿದೆ. ವೈದ್ಯರ, ನರ್ಸ್‌ಗಳ, ವಾರ್ಡ್ ಬಾಯ್ಸ್ ತಂಡಕ್ಕೆ ಅಭಿನಂದನೆಗಳು ಎಂದು ಮುಖ್ಯಮಂತ್ರಿ ವೀಡಿಯೊ ಟ್ವೀಟ್ ಮಾಡಿದ್ದಾರೆ.

ರಾಜ್ಯದ ಟೂರಿಸಂ ಸಚಿವ ಆದಿತ್ಯ ಠಾಕ್ರೆ ಚಪ್ಪಾಳೆಯ ಇಮೊಜಿಯೊಂದಿಗೆ ಈ ಸುದ್ದಿಯನ್ನು ಹೊರಬಿಟ್ಟಿದ್ದಾರೆ. ಮೂರು ಲಕ್ಷ ಜನರು ಇಷ್ಟರಲ್ಲಿ ವೀಡಿಯೊ ನೋಡಿದ್ದು ನಿರೀಕ್ಷೆಯ ಕಿರಣ ಎಂದು ವಿಶ್ಲೇಷಿಸಿದ್ದಾರೆ.ಆರೋಗ್ಯ ಕಾರ್ಯಕರ್ತರ ಕೆಲಸಕ್ಕೆ ಭಾರೀ ಅಭಿನಂದನೆಗಳು ವಿವಿಧ ಕಡೆಗಳಿಂದ ವ್ಯಕ್ತವಾಗುತ್ತಿವೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಳ ನಮ್ಮನ್ನು ಬೆಂಬಲಿಸಿ.