ಟಿವಿ ನೋಡುತ್ತಿದ್ದ 5 ಮಕ್ಕಳನ್ನು ಕಟ್ಟಡದಿಂದ ಕೆಳಗೆ ಎಸೆದ ಮಹಿಳೆ

0
565

ಸನ್ಮಾರ್ಗ ವಾರ್ತೆ

ರಾಂಚಿ,ನ.2: ಟಿವಿ ನೋಡುತ್ತಿದ್ದ ಐವರು ಮಕ್ಕಳನ್ನು ಮಹಿಳೆ ಎರಡನೆ ಮಹಡಿಯಿಂದ ಕೆಳಗೆ ದೂಡಿಹಾಕಿದ ಘಟನೆ ಜಾರ್ಖಂಡಿನ ಸಾಹೇಬ್ ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಿಹಾರಿ ಲಾಲ್ ಮಡಲ್ ಭವನ್ ಎಂಬ ಕಟ್ಟದ ಒಂದು ಕೋಣೆಯಲ್ಲಿ ಹತ್ತು ಮಕ್ಕಳು ಟಿವಿ ನೋಡುತ್ತಿದ್ದರು. ಇಲ್ಲಿಗೆ ಬಂದ ಮಹಿಳೆ ಐದು ಮಕ್ಕಳನ್ನು ಟೆರೇಸ್ ಕೊಂಡು ಹೋಗಿ ಒಂದೊಂದೆ ಮಕ್ಕಳನ್ನು ಕೆಳಗೆಸೆದಿದ್ದಾಳೆ. ಮಕ್ಕಳನ್ನು ರಕ್ಷಿಸಲು ಯತ್ನಿಸಿದ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ.

ಪೊಲೀಸರು ಮಹಿಳೆಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇತ್ತೀಚೆಗೆ ಮಹಿಳೆ ಮಾನಸಿಕ ಅನಾರೋಗ್ಯಕ್ಕೆ ತುತ್ತಾಗಿದ್ದರು ಎಂಬುದಾಗಿ ಪೊಲೀಸರು ತಿಳಿಸಿದ್ದು ಮಕ್ಕಳ ಕುಟುಂಬಗಳು ಮಹಿಳೆಯ ವಿರುದ್ಧ ದೂರು ನೀಡಿಲ್ಲ.