ಸ್ವಯಂ ಕ್ವಾರಂಟೈನ್‌‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್

0
433

ಸನ್ಮಾರ್ಗ ವಾರ್ತೆ

ಜನೀವ, ನ.2: ಕೊರೊನ ಇದ್ದ ವ್ಯಕ್ತಿಯೊಂದಿಗೆ ಸಂಪರ್ಕ ಇತ್ತು ಎನ್ನುವ ಕಾರಣದಿಂದ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಜನರಲ್ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಸ್ವಯಂ ಕ್ವಾರಂಟೈನ್‌ಗೊಳಗಾಗಿದ್ದಾರೆ. ಈ ವಿವರವನ್ನು ಅವರೇ ತಿಳಿಸಿದ್ದು ಇದುವರೆಗೆ ತನಗೆ ಕೊರೋನದ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಹತ್ತು ದಿವಸ ಮನೆಯಲ್ಲಿಯೇ ಕೂತು ಡಬ್ಲ್ಯೂ‌ಎಚ್‌ಓದ ಕೆಲಸ ನೋಡಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಜೊತೆಗೆ ಮಹಾಮಾರಿಯನ್ನು ಒಗ್ಗಟ್ಟಿನಿಂದ ಎದುರಿಸಬೇಕಾಗಿದೆ. ಡಬ್ಲ್ಯೂಎಚ್‍ಓ ಮತ್ತು ಆರೋಗ್ಯ ಕಾರ್ಯಕರ್ತರ ಸೂಚನೆಗಳನ್ನು ಪಾಲಿಸಬೇಕೆಂದು ಕರೆ ನೀಡಿದ್ದಾರೆ. ಮಾರ್ಚ್ 11ಕ್ಕೆ ಕೊರೋನ ಮಹಾಮಾರಿಯೆಂದು ವಿಶ್ವಾರೋಗ್ಯ ಸಂಘಟನೆ ಘೋಷಿಸಿತ್ತು. ಅಮೆರಿಕ, ಭಾರತ, ಬ್ರೆಝಿಲ್‍ಗಳಲ್ಲಿ ವಿಶ್ವದಲ್ಲಿ ಅತೀ ಹೆಚ್ಚು ಕೊರೋನ ಪ್ರಕರಣಗಳು ಇದುವರೆಗೆ ವರದಿಯಾಗಿವೆ.