ರಾಹುಲ್‌ ಗಾಂಧಿಯೊಂದಿಗೆ ಕನ್ಹಯ್ಯ, ಜಿಗ್ನೇಶ್ ಮೇವಾನಿ ಭೇಟಿ; ಕಾಂಗ್ರೆಸ್ ಸೇರ್ಪಡೆ ವದಂತಿ

0
494

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಸಿಪಿಐ ನಾಯಕ ಜೆಎನ್‍ಯು ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಮತ್ತು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಯವರು ರಾಹುಲ್ ಗಾಂಧಿಯೊಂದಿಗೆ ಚರ್ಚಿಸಿದ್ದು ಇಬ್ಬರು ಕಾಂಗ್ರೆಸ್ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಮಂಗಳವಾರ ಇಬ್ಬರು ರಾಹುಲ್‍ರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಭೇಟಿಯ ಕುರಿತ ವಿವರಗಳನ್ನು ನೀಡಲು ಕನ್ಹಯ್ಯ ನಿರಾಕರಿಸಿದ್ದಾರೆ.

ಪ್ರಶಾಂತ್ ಕಿಶೋರ್ ಜೊತೆ ಎರಡು ಸಲ ಕನ್ಹಯ್ಯ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದರು. ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆ ಬಹುತೇಕ ಖಚಿತವಾದ ಸಮಯದಲ್ಲಿ ಇಬ್ಬರ ಭೇಟಿ ನಡೆದಿದೆ. ಕನ್ಹಯ್ಯ ಕುಮಾರ್‌ರನ್ನು ಪಾರ್ಟಿಗೆ ಸೇರಿಸುವ ವಿಷಯವನ್ನು ಕಾಂಗ್ರೆಸ್ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಕನ್ಹಯ್ಯ ಬಂದರೆ ಯುವಕರಿಗೆ ಪಾರ್ಟಿಯಲ್ಲಿ ಆಕರ್ಷಣೆಯಾಗಲಿದ್ದಾರೆ ಎಂದು ಕಾಂಗ್ರೆಸ್‍ನ ಅಂಬೋಣವಾಗಿದೆ.

ಗುಜರಾತ್ ಶಾಸಕ ದಲಿತ ಅಧಿಕಾರ್ ಮಂಚ್ ಸಂಚಾಲಕ ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಹೋಗುವ ಸೂಚನೆಗಳು ಬಂದಿವೆ. ಜಿಗ್ನೇಶ್ ಮೊದಲ ಹಂತದ ಚರ್ಚೆ ನಡೆಸಿರುವುದು ವರದಿಯಾಗಿದೆ.

ಗುಜರಾತಿನಲ್ಲಿ ಜಿಗ್ನೇಶ್ ಸ್ಪರ್ಧಿಸಿದ ಕ್ಷೇತ್ರದಲ್ಲಿ ಕಳೆದ ಸಲ ಕಾಂಗ್ರೆಸ್ ಅಭ್ಯರ್ಥಿ ನಿಲ್ಲಿಸಿರಲಿಲ್ಲ. 2019ರ ಚುನಾವಣೆಯಲಿ ಸಿಪಿಐ ಕೋಟೆ ಬೆಗುಸರಾಯ್‍ನಿಂದ ಕನ್ಹಯ್ಯ ಕುಮಾರ್ ಸ್ಪರ್ಧಿಸಿ ಸೋತಿದ್ದರು. ಬಿಜೆಪಿ ಅಭ್ಯರ್ಥಿ ಗಿರಿರಾಜ್ ಸಿಂಗ್ ವಿರುದ್ಧ ನಾಲ್ಕು ಲಕ್ಷ ಮತಕ್ಕೂ ಹೆಚ್ಚಿನ ಅಂತರದಿಂದ ಸೋತಿದ್ದರು.