ಭಾರತದಲ್ಲಿ ಯುಎಪಿಎ ಪ್ರಯೋಗ ಭಯ ಹುಟ್ಟಿಸುತ್ತಿದೆ- ವಿಶ್ವಸಂಸ್ಥೆ

0
817

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಭಾರತಾದ್ಯಂತ ಕಾನೂನು ವಿರೋಧಿ ಚಟುವಟಿಕೆಗಳ ನಿಷೇಧ ಕಾಯಿದೆ(ಯುಎಪಿಎ) ಪ್ರಯೋಗಿಸುವುದು ಹೆದರಿಕೆ ಹುಟ್ಟಿಸುತ್ತಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಘಟನೆಯ ಮಿಶೇಲ್ ಬೆಶ್‍ಲೆಟ್ ಆರೋಪಿಸಿದರು. ಈ ಕಾನೂನನ್ನು ಅತೀ ಹೆಚ್ಚು ಜನರ ಮೇಲೆ ಜಮ್ಮು-ಕಾಶ್ಮೀರದಲ್ಲಿ ಹೇರಲಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಮಿಶನರ್ ಮಿಶೇಲ್ ಹೇಳಿದರು.

ಅಭಿವ್ಯಕ್ತಿ ಸ್ವಾತಂತ್ರ್ಯ ಉಪಯೋಗಿಸಿದ್ದಕ್ಕೆ ಮಾಧ್ಯಮದವರನ್ನು ಜೈಲಿಗಟ್ಟಲಾಗಿದೆ ಎಂದ ಅವರು ಸಾರ್ವಜನಿಕ ಕಾರ್ಯಕ್ರಮಗಳ ನಿಯಂತ್ರಣ, ವರದಿ ವಿನಿಮಯ ನಿಷೇಧ ಜಮ್ಮು-ಕಾಶ್ಮೀರದಲ್ಲಿ ಮುಂದುವರಿಯುತ್ತಿದೆ. ಮಾಧ್ಯಮದವರು ಈ ಹಿಂದೆ ಎಂದು ಇಲ್ಲದ ಒತ್ತಡವನ್ನು ಎದುರಿಸುತ್ತಿದ್ದಾರೆ ಎಂದು ಮಿಶೇಲ್ ಬೆಟ್ಟು ಮಾಡಿದರು.

ಭಯೋತ್ಪಾದನಾ ಚಟುವಟಿಕೆಗಳನ್ನು ತಡೆಯಲು ಮತ್ತು ಅಭಿವೃದ್ಧಿಗೆ ಪ್ರೋತ್ಸಾಹ ನೀಡುವ ಸರಕಾರದ ಯತ್ನಗಳನ್ನು ಅಂಗೀಕರಿಸಿದ ಬೇಶ್‍ಲೆಟ್ ಜಮ್ಮು-ಕಾಶ್ಮೀರದ ಮೇಲಿನ ನಿಯಂತ್ರಣಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ಹೆಚ್ಚು ಆತಂಕ ಮತ್ತು ವಿರೋಧವನ್ನು ವ್ಯಕ್ತಪಡಿಸಿದ್ದಾರೆ.