ಬೆಳ್ತಂಗಡಿ: ಜಮಾಅತೆ ಇಸ್ಲಾಮೀ ಹಿಂದ್, ಸಮಾಜ ಸೇವಾ ಘಟಕದ ಕಛೇರಿ ಉದ್ಘಾಟನೆ

0
572

ಸನ್ಮಾರ್ಗ ವಾರ್ತೆ

ಬೆಳ್ತಂಗಡಿಯ ಲೋಬೋ ಟವರ್ಸ್ ನ ಮೊದಲನೇ ಮಹಡಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಸಮಾಜ ಸೇವಾ ಘಟಕದ ಕಛೇರಿಯನ್ನು ಬಿ.ಸಿ.ಸಿ.ಐ ಅಧ್ಯಕ್ಷರಾದ ರೊನಾಲ್ಡ್ ಲೋಬೋರವರು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು .

ಮುಖ್ಯ ಅತಿಥಿಗಳಾಗಿ ಆಗಮಿಸಿದ ವಕೀಲರಾದ ಅಬಿನ್ ಪ್ರಾನ್ಸಿಸ್, ಶೇಕ್ ಕುಂಞಿ, ಸಮಾಜ ಸೇವಕರಾದ ಆನ್ಸಾರ್ ರವರು ಶುಭ ಹಾರೈಸಿದರು,

ತರುವಾಯ ಸಮಾಜ ಸೇವೆ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಅಬ್ದುಲ್ ಗಫೂರ್ ರವರು ಪ್ರಸ್ತಾವಿಕ ಮಾತುಗಳನ್ನಾಡಿದರು ಕೊನೆಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕರಾದ ಅಬ್ದುಲ್ ಕರೀಮ್ ರವರು ಸಮಾರೋಪ ನುಡಿಗಳನ್ನಡುತ್ತ ಸಮಾಜ ಸೇವಾ ಘಟಕವು ಬೇರೆ ಬೇರೆ ಕಡೆಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಜನ ಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಈ ಕಚೇರಿಯನ್ನು ತೆರೆಯಲಾಗಿದೆ ಸಾರ್ವಜನಿಕರು ಈ ಕಚೇರಿಯ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಹೇಳಿದರು.

ಅಯೂಬ್ ಅಲದಂಗಡಿ, ಮೊಹಮ್ಮದ್ ಶಾಫಿ ಮತ್ತಿತರು ಉಪಸ್ಥಿತರಿದ್ದರು.