ಜೆಎನ್‍ಯು ಹಿಂಸಾಚಾರ: ಪ್ರತಿಭಟಿಸಿದ ಮುಂಬೈ ವಕೀಲರ ಬಂಧನ

0
807

ಸನ್ಮಾರ್ಗ ವಾರ್ತೆ

ಮುಂಬೈ, ಫೆ. 5: ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ನಡೆದ ಹಿಂಸಾಚಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಪ್ರಮುಖ ಮಾನವಹಕ್ಕು ವಕೀಲರಾದ ಮಿಹಿರ್ ದೇಸಾಯಿ, ಲಾರ ಜೆಸಾನಿಯವರನ್ನು ಮಂಗಳವಾರ ಕೊಲಾಬ ಪೊಲೀಸರು ಬಂಧಿಸಿದ್ದಾರೆ. ಬಳಿಕ ಹೇಳಿಕೆ ಪಡೆದುಕೊಂಡು ಇಬ್ಬರನ್ನು ಪೊಲೀಸರು ಬಿಟ್ಟಿದ್ದಾರೆ. ಗೇಟ್ ವೇ ಆಫ್ ಇಂಡಿಯದಲ್ಲಿ ಸೇರಿ ವಾಹನ ಸಂಚಾರ ಅಡ್ಡಿಪಡಿಸಿದ್ದು ಮತ್ತು ಇತರ ವರ್ತನೆಗಳಿಗೆ ಅವರ ವಿರುದ್ಧ ಕೇಸು ದಾಖಲಿಸಲಾಗಿದೆ. ಜನವರಿ ಏಳರಂದು ವಕೀಲರು ಮತ್ತು ಮಾಜಿ ಜೆಎನ್‍ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಸಹಿತ 60ರಷ್ಟು ಮಂದಿಯ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

ಇದೇವೇಳೆ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿಲ್ಲ, ರ್ಯಾಲಿ ಶುರುವಾಗುವ ಮೊದಲೇ ತಾನು ಮುಂಬೈ ನಗರದಿಂದ ಹಾವ್ರ ಹೋಗಿದ್ದೆ ಎಂದು ಉಮರ್ ಖಾಲಿದ್ ಹೇಳಿದರು. ಶಾಂತಿಯುತ ಪ್ರತಿಭಟನೆಯಲ್ಲಿ ಭಾಗಹಿಸಿದ್ದೇನೆ ಮತ್ತು ಅದರಲ್ಲಿ ತನಗೆ ಹೆಮ್ಮೆ ಇದೆ ಎಂದು ಮಿಹಿರ್ ದೇಸಾಯಿ ಹೇಳಿದರು.