ಪ್ರಧಾನಿಯ ಕ್ಷೇತ್ರದಲ್ಲಿ ಹಸಿವು ಬಾಧೆ: ವರದಿ ಮಾಡಿದ ಪತ್ರಕರ್ತೆಯ ವಿರುದ್ಧ ಕೇಸು

0
790

ಸನ್ಮಾರ್ಗ ವಾರ್ತೆ

ಲಕ್ನೊ,ಜೂ.19: ಪ್ರಧಾನಿಯವರ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಲಾಕ್‍ಡೌನ್ ಸಂಕಟಗಳನ್ನು ವರದಿ ಮಾಡಿದ್ದ ಪತ್ರಕರ್ತೆಯ ವಿರುದ್ಧ ಉತ್ತರಪ್ರದೇಶ ಪೊಲೀಸರು ಕೇಸು ದಾಖಲಿಸಿದ್ದಾರೆ. ಸ್ಕ್ರಾಲ್ ಇನ್ ಪತ್ರಕರ್ತೆ ಸುಪ್ರಿಯಾ ಶರ್ಮರ ವಿರುದ್ಧ ವಾರಣಾಸಿಯ ಗ್ರಾಮದ ಜನರು ಹಸಿವಿನಲ್ಲಿ ಎಂಬ ಲೇಖನವನ್ನು ಅವರು ಬರೆದಿದ್ದರು. ಮಾನಹಾನಿ, ಸಾಂಕ್ರಾಮಿಕ ರೋಗ ನಿಯಂತ್ರಣ ಕಾನೂನು ಉಲ್ಲಂಘನೆ, ಪರಿಶಿಷ್ಟ ಜಾತಿ ಪರಿಶಿಷ್ಟವರ್ಗದವರ ವಿರುದ್ಧ ಅಕ್ರಮ ತಡೆ ಇತ್ಯಾದಿ ಪ್ರಕರಣಗಳನ್ನು ಅವರ ಮೇಲೆ ಹಾಕಲಾಗಿದೆ.

ಲಾಕ್‌ಡೌನ್ ಕಾಲದಲ್ಲಿ ಉಚಿತ ರೇಷನ್ ಸಿಗದೆ ಹಸಿವಿನಿಂದ ಬಳಲುತ್ತಿರುವೆ ಎಂದ ವಾರಣಾಸಿಯ ದೊಮಾರಿ ಎಂಬಲ್ಲಿನ ಮಾಲ ಎಂಬ ಮಹಿಳೆಯ ವಿವರಣೆಯನ್ನು ಶರ್ಮ ಲೇಖನದಲ್ಲಿ ಬಳಸಿಕೊಂಡಿದ್ದರು. ಆದರೆ ನಾನು ಹಾಗೆ ಹೇಳಿಲ್ಲ ಎಂದು ಮಾಲ ದೂರು ನೀಡಿದ್ದಾರೆ. ನಂತರ ಜೂನ್ 13ಕ್ಕೆ ಸುಪ್ರಿಯಾ ಶರ್ಮರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಲಾಕ್‍ಡೌನ್ ಸಮಯದಲ್ಲಿ ನನಗೆ ಯಾವುದೇ ಕಷ್ಟವಾಗಿಲ್ಲ. ನಾನು ಮತ್ತು ಮಕ್ಕಳು ಹಸಿವಿನಲ್ಲಿದ್ದೆವು ಎಂದು ಹೇಳುವ ಮೂಲಕ ನನ್ನ ಬಡತನ ಮತ್ತು ಜಾತಿಯನ್ನು ಅಪಮಾನಿಸಿದ್ದಾರೆ ಎಂದು ಮಾಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದೇವೇಳೆ, ವರದಿಯಲ್ಲಿ ತಾನು ದೃಢವಾಗಿದ್ದೇವೆ ಎಂದು ಸ್ಕ್ರಾಲ್ ಹೇಳಿದೆ. ಸ್ವತಂತ್ರ ಪತ್ರಕರ್ತರನ್ನು ಬೆದರಿಸಿ ತಡೆಯಲು, ನಿಶಬ್ದಗೊಳಿಸುವ ಕ್ರಮ ಇದು. ಲಾಕ್‌ಡೌನ್ ಕಾಲದಲ್ಲಿ ಕಷ್ಟಪಡುತ್ತಿರುವ ಜೀವನ ಪರಿಸ್ಥಿತಿಯು ಹೊರಬರದಂತೆ ತಡೆಯುವ ಪ್ರಯತ್ನ ಇದು ಎಂದು ಸ್ಕ್ರಾಲ್ ತಿಳಿಸಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.