ಸನ್ಮಾರ್ಗ ವಾರ್ತೆ
ಮಂಗಳೂರು, ಮಾ 28: ದೇಶದಲ್ಲಿ ಲಾಕ್ ಡೌನ್ ಘೋಷಣೆಯ ಬಳಿಕ ಜಿಲ್ಲೆಯಲ್ಲಿ ಹಲವು ಆಸ್ಪತ್ರೆಗಳು ತಮ್ಮ ಹೊರ ರೋಗಿಗಳಿಗೆ ನೀಡುವ ಚಿಕಿತ್ಸಾ ಸೇವೆಯನ್ನು ಸ್ಥಗಿತಗೊಳಿಸಿದ್ದರಿಂದ ತೊಂದರೆಗೀಡಾದವರಿಗಾಗಿ ದೇರಳಕಟ್ಟೆಯಲ್ಲಿರುವ ಕೆ.ಎಸ್.ಹೆಗ್ಡೆ ಆಸ್ಪತ್ರೆ ವಿನೂತನವಾಗಿ ರೋಗಿಗಳ ಸೇವೆಗೆ ನಿಂತಿದೆ. ಆನ್ ಲೈನ್ ನ ಮೂಲಕ ರೋಗಿಗಳ ಸೇವೆಗೆ ಆಸ್ಪತ್ರೆ ಮುಂದಾಗಿದೆ.
ಆಸ್ಪತೆಯೂ ಎಲ್ಲಾ ವಿಭಾಗದ ವೈದ್ಯರ ವಾಟ್ಸಪ್ ನಂಬರ್ ನೀಡಿದ್ದು, ಆಯಾ ವಿಭಾಗದ ವೈದ್ಯರಿಗೆ ಯಾವುದಾದರೂ ರೋಗಗಳಿಂದ ಬಳಲುತ್ತಿರುವ ರೋಗಿಗಳು ವಾಟ್ಸಾಪ್ ನಲ್ಲಿ ತಮ್ಮ ರೋಗ ಲಕ್ಷಣ ಮಾಹಿತಿನ್ನು ರವಾನಿಸಬೇಕು . ಇದರೊಂದಿಗೆ ಹೆಸರು, ವಯಸ್ಸು, ಲಿಂಗ, ತೂಕ, ಖಾಯಿಲೆಯ ಮಾಹಿತಿ ಹಾಗೂ ಹಳೆಯ ಪ್ರಿಸ್ಕ್ರಿಪ್ಷನ್ ಗಳಿದ್ದರೆ ತಪ್ಪದೆ ನೀಡಬೇಕು. ಇವೆಲ್ಲವನ್ನೂ ನೋಡಿದ ಬಳಿಕ ಅಗತ್ಯವಿದ್ದರೆ ವೈದ್ಯರೇ ನಿಮಗೆ ಕರೆ ಮಾಡುತ್ತಾರೆ ಇಲ್ಲವೇ, ಯಾವ ಔಷಧಿ ಸೂಕ್ತವೆಂದು ಅಥವಾ ವೈದ್ಯರ ಸಲಹೆಯನ್ನು ವೈದ್ಯರ ನೊಂದಣೆ ಸಂಖ್ಯೆ ಇರುವ ಚೀಟಿಯಲ್ಲಿ ಬರೆದು ರೋಗಿಗಳಿಗೆ ವೈದ್ಯರು ವಾಟ್ಸಾಪ್ ಮಾಡಲಿದ್ದಾರೆ. ಬಳಿಕ ಔಷಧಿಯನ್ನು ಸಮೀಪದ ಮೆಡಿಕಲ್ ನಲ್ಲಿ ಪಡೆಯಬಹುದಾಗಿದೆ.ಮ
ಲಾಕ್ ಡೌನ್ ಕಾರಣ ಮನೆಯಲ್ಲಿರುವುದು ಸಧ್ಯದ ಮುನ್ನೆಚ್ಚರಿಕಾ ಕ್ರಮವಾಗಿರುವ ಹಿನ್ನಲೆಯಲ್ಲಿ ರೋಗಿಗಳ ಅನುಕೂಲಕ್ಕಾಗಿ ದೇರಳಕಟ್ಟೆಯಲ್ಲಿರುವ ಕೆ.ಎಸ್.ಹೆಗ್ಡೆ ಆಸ್ಪತ್ರೆ ರಾಜ್ಯದಲ್ಲೇ ಮೊದಲ ಬಾರಿಗೆ ಈ ವಿನೂತನ ಸೇವೆಗೆ ಮುಂದಾದಾಗಿದೆ.












