ಉಸಿರಾಟವೇ ಕಷ್ಟ, ನಡೆಯಲೂ ಅಸಾಧ್ಯ, ದೇಹ ಭಾರ: ಕೊರೋನಾ ಪೀಡಿತ ಫುಟ್ ಬಾಲ್ ತಾರೆ ಡೆಬಾಲ ಅನುಭವ

0
873

ಸನ್ಮಾರ್ಗ ವಾರ್ತೆ

ಮಿಲನ್, ಮಾರ್ಚ್ 28- ಜಾಗತಿಕವಾಗಿ ಕೊರೋನಾಕ್ಕೆ 10 ಸಾವಿರಕ್ಕಿಂತಲೂ ಅಧಿಕ ಮಂದಿ ಬಲಿಯಾಗಿರುವ ಈ ಹೊತ್ತಿನಲ್ಲಿ ಖ್ಯಾತ ಫುಟ್ಬಾಲ್ ತಾರೆ ಪೌಲೋ ಡೆಬಾಲ ಅವರು ಕೊರೋನಾದೊಂದಿಗೆ ತನ್ನ ಒಂದು ವಾರದ ಹೋರಾಟದ ಸಂಕಟವನ್ನು ಮಾಧ್ಯಮದೊಂದಿಗೆ ವಿವರಿಸಿದ್ದಾರೆ. ಮಾರ್ಚ್ 21ರ ಶನಿವಾರ ಡೆಬಾಲ ಮತ್ತು ಅವರ ಗೆಳತಿಗೆ ಕೊರೋನಾ ಇರುವುದು ದೃಢಪಟ್ಟಿತ್ತು.

ಅತ್ಯಂತ ಸಂಕಷ್ಟಮಯ ಅನುಭವಗಳನ್ನು ನಾನು ಈ ಸಂದರ್ಭದಲ್ಲಿ ಎದುರಿಸಿದೆ ಎಂದವರು ಟಿವಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಸೋಂಕಿನಿಂದಾಗಿ ಉಸಿರಾಟಕ್ಕೆ ತುಂಬಾ ತೊಂದರೆಯಾಯಿತು. ನಡೆಯುವುದಕ್ಕೋ ಇನ್ನಾವುದೇ ಕೆಲಸಕ್ಕೋ ದೇಹ ಸ್ಪಂದಿಸುತ್ತಿರಲಿಲ್ಲ. ದೇಹದಲ್ಲಿ ಭಾರವಾದ ಅನುಭವವಾಗುತ್ತಿತ್ತು. ಅತಿ ಕಠಿಣ ಉಸಿರಾಟದ ಸಮಸ್ಯೆ ಎದುರಾಗಿತ್ತು. ನನ್ನ ಗೆಳತಿಗೂ ಇದೇ ಅನುಭವವಾಗಿದೆ. ಈಗ ತಾನು ಮತ್ತು ತನ್ನ ಗೆಳತಿ ಕಠಿಣ ಪರಿಸ್ಥಿತಿಯಿಂದ ಹೊರಬಿದ್ದಿದ್ದು ಆರಾಮವಾಗಿದ್ದೇವೆ ಎಂದು ಅವರು ತನ್ನ ವಿವರವನ್ನು ನೀಡಿದ್ದಾರೆ.

ಇದೇ ವೇಳೆ, ಅವರ ಸಹ ಪುಟ್ಬಾಲ್ ಆಟಗಾರರಾದ ರುಗಾಣಿ ಮತ್ತು ಬೈಸೆ ಅವರಲ್ಲಿ ಕೊರೋನಾ ರೋಗ ಲಕ್ಷಣಗಳು ಪತ್ತೆಯಾಗಿವೆ.