ಟ್ರಂಪ್ ಅಧ್ಯಕ್ಷ ಸ್ಥಾನಕ್ಕೆ ಅನರ್ಹ: ಚುನಾವಣಾ ಪ್ರಚಾರದಲ್ಲಿ ಗುಡುಗಿದ ಕಮಲಾ ಹ್ಯಾರಿಸ್

0
446

ಸನ್ಮಾರ್ಗ ವಾರ್ತೆ

ವೆಲ್ಲಿಂಗ್ಟನ್,ಆ.13: ಡೆಮಕ್ರಾಟಿಕ್ ಪಾರ್ಟಿಯ ಉಪಾಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಚುನಾವಣಾ ಪ್ರಚಾರ ಆರಂಭಿಸಿದ್ದು, ಅಧ್ಯಕ್ಷ ಸ್ಥಾನೀಯ ಅಭ್ಯರ್ಥಿಯಾದ ಜೋ ಬೈಡನ್‍ರ ಹುಟ್ಟೂರು ವೆಲ್ಲಿಂಗ್ಟನ್‌ನ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೆ ಅರ್ಹರಲ್ಲ ಎಂದು ಗುಡುಗಿದರು.

ಕಮಲಾ, ಬೈಡನ್ ಡೆಮಕ್ರಾಟಿಕ್ ಪಾರ್ಟಿ ಅಭ್ಯರ್ಥಿಗಳಾದರೆ, ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಅಭ್ಯರ್ಥಿಯಾಗಿ ಮರು ಸ್ಪರ್ಧೆಗಿಳಿದಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ವಂಶೀಯ ವಿಭಜನೆಯನ್ನು ನಿಲ್ಲಿಸಲು ಟ್ರಂಪ್‍ಗೆ ಸಾಧ್ಯವಿಲ್ಲ. ವಂಶೀಯತೆ ಮತ್ತು ಅನ್ಯಾಯ ಬೀದಿಯಲ್ಲಿ ಕಾಣಿಸಿಕೊಳ್ಳುವ ಪರಿಸ್ಥಿತಿ ಇಂದಿದೆ ಎಂದು ಕಮಲಾ ಹ್ಯಾರಿಸ್ ಹೇಳಿದರು.

ಕೊರೋನ ತಡೆಗಟ್ಟುವುದರಲ್ಲಿ ಟ್ರಂಪ್ ವಿಫರಾದರು. ಇದು ದೇಶ ಅರ್ಥವ್ಯವಸ್ಥೆಗೆ ಹಾನಿ ತಂದೊಡ್ಡಿತು ಎಂದು ಅವರು ಹೇಳಿದರು. ಜೊ ಬೈಡನ್ ಮಾತಾಡಿ ಕಮಲಾ ಹ್ಯಾರಿಸ್ ಸಮರ್ಥ ಕೆಲಸದ ಪರಿಚಯ ಇರುವ ವ್ಯಕ್ತಿ ಎಂದು ಹೇಳಿದರು.

ವಲಸಿಗ ಕುಟುಂಬದ ಮಗು ಅವರು. ವಲಸಿಗ ಕುಟುಂಬದ ಅವಸ್ಥೆ ನಮ್ಮ ದೇಶದಲ್ಲಿ ಎಷ್ಟು ಇದೆ ಎಂದು ಕಮಲಾರಿಗೆ ಚೆನ್ನಾಗಿ ಗೊತ್ತಿದೆ. ಸವಾಲುಗಳನ್ನು ಎದುರಿಸುವುದು ಅವರಿಗೆ ಗೊತ್ತಿದೆ ಎಂದು ಜೊ ಬೈಡನ್ ಹೇಳಿದರು.

ಕಮಲಾ ಹ್ಯಾರಿಸ್ ಕ್ಯಾಲಿಫೋರ್ನಿಯ ಸೆನೆಟರ್ ಆಗಿದ್ದು, ಅವರನ್ನು ಉಪಾಧ್ಯಕ್ಷೀಯ ಸ್ಥಾನದ ಅಭ್ಯರ್ಥಿಯಾಗಿ ಜೊ ಬೈಡನ್ ಆಯ್ಕೆ ಮಾಡಿದ್ದಾರೆ. ಕಮಲಾ ಹ್ಯಾರಿಸ್‍‌ರವರಿಗೆ 55 ವರ್ಷ ವಯಸ್ಸಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.