ಫೇಸ್‍ಬುಕ್ ಪೋಸ್ಟ್ ಮಾಡಿ ಆತ್ಮಹತ್ಯೆ ಮಾಡಲು ಯತ್ನಿಸಿದ ಮಿಮಿಕ್ರಿ ಕಲಾವಿದನನ್ನು ಉಪಾಯದಿಂದ ರಕ್ಷಿಸಿದ ಪೊಲೀಸರು

0
189

ಸನ್ಮಾರ್ಗ ವಾರ್ತೆ

ಕಾನ್‍ಪುರ: ಆತ್ಮಹತ್ಯೆ ಮಾಡುತ್ತಿದ್ದೇನೆ ಎಂದು ಫೇಸ್‍ಬುಕ್ ಪೋಸ್ಟ್ ಹಾಕಿ ಮಿಮಿಕ್ರಿ ಕಲಾವಿದ ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಉಪಾಯದಿಂದ ಪೊಲೀಸರು ರಕ್ಷಿಸಿದ್ದಾರೆ. ‘ನನ್ನ ಸಾವಿನ ನೇರ ಪ್ರಸಾರ ಹನ್ನೆರಡು ಗಂಟೆಗೆ ನೋಡಬಹುದು’ ಎಂದು ಅರ್ಪಿತ್ ಸೈನಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದ. ಪೊಸ್ಟ್ ನೋಡಿದ ಅರ್ಪಿತ್‍ನ ಫಾಲೊವರ್ಸ್ ಪೊಲೀಸರಿಗೆ ತಿಳಿಸಿದ್ದಾರೆ.

ನಂತರ ಅರ್ಪಿತ್‍ರ ಮನೆಯ ವಿಳಾಸ ಪತ್ತೆಹಚ್ಚಿದ ಪೊಲೀಸರು ಗೆಳೆಯನ ಫೋನ್ ನಂಬರ್ ಸಂಗ್ರಹಿಸಿದರು. ಸ್ಟೇಶನ್ ಹೌಸ್ ಆಫಿಸರ್ ಅಮಿತ್ ಬದಾನ ಪೊಲೀಸರು ಮನೆಗೆ ತಲುಪುವವರೆಗೂ ಅರ್ಪಿತ್‍ನೊಂದಿಗೆ ಮಾತಾಡುತ್ತಿದ್ದರು. ಮನೆಗೆ ಬಂದ ಪೊಲೀಸರು ಆತ್ಮಹತ್ಯೆಗೆ ಸಿದ್ಧತೆ ನಡೆಸುತ್ತಿದ್ದ ನೇಣು ನೋಡಿದರು. ಅಳತೊಡಗಿದ ಅರ್ಪಿತ್‍ನನ್ನು ಬದಾನ ಸಮಾಧಾನಿಸಿದರು. ತಾನು ಅಲ್ಲಿಗೆ ಬಂದಿದ್ದೇನೆ ಅರ್ಪಿತ್ ಸುರಕ್ಷಿತವಾಗಿದ್ದಾನೆ ಎಂದು ಬದಾನ ಮಾಧ್ಯಮಗಳಿಗೆ ತಿಳಿಸಿದರು.

ಕೊರೋನ ಲಾಕ್‍ಡೌನ್ ಕಾರಣದಿಂದಾಗಿ ಅರ್ಪಿತ್ ತುಂಬ ಆರ್ಥಿಕ ಕಷ್ಟ ಅನುಭವಿಸಿದ್ದ. ಆರ್ಥಿಕವಾಗಿ ಇತರರನ್ನು ಆಶ್ರಯಿತನಾಗುವ ಸ್ಥಿತಿ ಮತ್ತು ತಂದೆ-ತಾಯಿಯ ಅನಾರೋಗ್ಯ ಆತನ ನೋವಿಗೆ ಕಾರಣವಾಗಿತ್ತು. ಈ ಮಾನಸಿಕ ಅಸ್ವಾಥ್ಯ ಆತ್ಮಹತ್ಯೆಗೆ ಪ್ರೇರೇಪಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.