ಸನ್ಮಾರ್ಗ ವಾರ್ತೆ
ಎಡಕ್ಕರ,ಎ.19: ಕೇರಳದಲ್ಲಿ ಜಲಪ್ರಳಯ, ಗುಡ್ಡ ಕುಸಿತಗಳಿಂದ ಹಾನಿಯಾಗಿರುವ ಪ್ರದೇಶಕ್ಕೆ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಭೇಟಿ ನೀಡಿದ್ದಾರೆ. ಮೊದಲ ಹಂತದಲ್ಲಿ ಹತ್ತು ಕೋಟಿ ರೂಪಾಯಿಯ ಧನ ಸಹಾಯವನ್ನು ಅವರು ಘೋಷಿಸಿದರು. ಪುನರ್ವಸತಿ ಕಾರ್ಯದಲ್ಲಿ ಸರಕಾರದೊಂದಿಗೆ ಸೇರಿ ಕೆಲಸ ಮಾಡುವುದಾಗಿ ಅವರು ತಿಳಿಸಿದರು. ಸಂತ್ರಸ್ತರು ನೊಂದುಕೊಳ್ಳಬೇಡಿ. ನಾವು ಕಾರಣಗಳನ್ನು ಚಿಂತಿಸಬೇಕಾಗಿಲ್ಲ. ಅದನ್ನು ಸರಕಾರಿ ಅಧಿಕಾರಿಗಳು ನಿಭಾಯಿಸಲಿದ್ದಾರೆ ಎಂದು ಕಾಂತಪುರಂ ಹೇಳಿದರು. ಸಚಿವ ಜಿ.ಸುಧಾಕರನ್, ಶಾಸಕ ಪಿ.ವಿ. ಅನ್ವರ್ರೊಂದಿಗೆ ಅವರು ಮಾತುಕತೆ ನಡೆಸಿದರು.












