ರಾಷ್ಟ್ರೀಯ ಪೌರತ್ವ ಪಟ್ಟಿಯಲ್ಲಿ ಹೆಸರು ಸೇರಿಸಲು ನಿರ್ಲಕ್ಷ್ಯ; ಐಎಎಸ್ ಅಧಿಕಾರಿ ಪ್ರತೀಕ್ ಹಜೇಲ ವಿರುದ್ಧ ಕೇಸು

0
618

ಸನ್ಮಾರ್ಗ ವಾರ್ತೆ

ಗುವಾಹಟಿ,ಸೆ.8: ರಾಷ್ಟ್ರೀಯ ಪೌರತ್ವ ಪಟ್ಟಿ ಎನ್‍ಆರ್‍‌ಸಿ ಅಸ್ಸಾಮಿನ ಹೊಣೆಯಿದ್ದ ಐಎಎಸ್ ಅಧಿಕಾರಿ ಪ್ರತೀಕ್ ಹಜೇಲರ ವಿರುದ್ಧ ಎರಡು ಕೇಸು ದಾಖಲಾಗಿವೆ. ಪಟ್ಟಿಯಿಂದ ಹೊರಗಾದವರು ದಾಖಲಿಸಿದ ಕೇಸು ಇದು ಎಂದು ಪೊಲೀಸರು ಹೇಳಿದ್ದಾರೆ. ಮುಸ್ಲಿಂ ವಿದ್ಯಾರ್ಥಿ ಸಂಘಟನೆ ಗೊರಿಯ ಮೊರಿಯ ಯುವ ಛಾತ್ರ ಪರಿಷತ್ ಹಾಗೂ ವಕೀಲರೊಬ್ಬರು ಹಜೇಲರನ್ನು ಕಾನೂನಿನ ಕಟಕಟೆಯಲ್ಲಿ ನಿಲ್ಲಿಸಿದ್ದಾರೆ. ಅಂತೂ ಹಜೇಲ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಚಂದನ್ ಮಜುಮ್ದಾರ್ ದಿಬ್ರುಗದಲ್ಲಿ ದೂರು ಕೊಟ್ಟಿದ್ದರು. ಇವರ ಹೆಸರು ಕೊನೆಯ ಪಟ್ಟಿಯಲ್ಲೂ ಇರಲಿಲ್ಲ. ತಾನು ಅಗತ್ಯ ದಾಖಲೆ ಕೊಟ್ಟಿದ್ದೆ. ಆದರೆ, ಅಧಿಕಾರಿಗಳಿಂದಾದ ನಿರ್ಲಕ್ಷ್ಯ ಮತ್ತು ಕ್ರಿಮಿನಲ್ ಸಂಚು ತನ್ನನ್ನು ಪಟ್ಟಿಯಿಂದ ಹೊರಗಿಡಲು ಕಾರಣವೆಂದು ಅವರು ಆರೋಪಿಸಿದ್ದಾರೆ. ಪೌರತ್ವ ಪಟ್ಟಿಯಲ್ಲಿ ಮನಃಪೂರ್ವಕ ಅಕ್ರಮವೆಸಗಲಾಗಿದೆ ಎಂದು ಛಾತ್ರ ಪರಿಷತ್ ಆರೋಪಿಸಿದೆ.

ಇದೇ ವೇಳೆ ಹಜೇಲ ಆರೋಪಗಳಿಗೆ ಉತ್ತರಿಸುವ ಗೋಜಿಗೇ ಹೋಗಿಲ್ಲ. ಮಾಧ್ಯಮಗಳಿಂದ ದೂರವುಳಿದಿದ್ದಾರೆ. ಸ್ವಯಂ ಸುಪ್ರೀಂಕೋರ್ಟು ಅವರಿಗೆ ಮಾತಾಡದಂತೆ ಸೂಚನೆ ನೀಡಿದೆ. 3,30,27,661 ಮಂದಿ ಪೌರತ್ವ ಪಟ್ಟಿಯಲ್ಲಿ ಸೇರಿಸಲು ಆಪೇಕ್ಷೆ ಸಲ್ಲಿಸಿದ್ದರು. ಇದರಲ್ಲಿ 3,11,21,004 ಮಂದಿಯನ್ನು ಪ್ರಜೆಗಳೆಂದು ಅಂಗೀಕರಿಸಲಾಗಿದೆ. 19,06,657 ಮಂದಿ ಪಟ್ಟಿಯಿಂದ ಹೊರಗಾಗಿದ್ದಾರೆ.