ಬೆಂಗಳೂರು, ಜು. 23: ಅನರ್ಹಗೊಳಿಸುವ ಕ್ರಮದ ಅಂಗವಾಗಿ ಕರ್ನಾಟಕ ಸ್ಪೀಕರ್ ಮುಂದೆ ನೇರವಾಗಿ ಹಾಜರಾಗಲು ಸಮಯಾವಕಾಶ ನೀಡಬೇಕೆಂದು ಕರ್ನಾಟಕದ ಭಿನ್ನಮತೀಯ ಶಾಸಕರು ಸ್ಪೀಕರ್ ಗೆ ಮನವಿ ಮಾಡಿದ್ದಾರೆ. ಒಂದು ತಿಂಗಳ ಸಮಯ ನಮಗೆ ನೀಡಬೇಕೆಂದು ಅವರು ರಮೇಶ್ ಕುಮಾರ್ ರನ್ನು ಆಗ್ರಹಿಸಿದ್ದು ಈ ವಿಷಯವನ್ನು ಸೂಚಿಸಿ ಸ್ಪೀಕರ್ ಗೆ ಪತ್ರವನ್ನು ಬರೆದಿದ್ದಾರೆ. ಆದ್ದರಿಂದ ಇಂದು ಹನ್ನೊಂದು ಗಂಟೆಗೆ ಸ್ಪೀಕರ್ ಮುಂದೆ ಅತೃಪ್ತ ಶಾಸಕರು ಹಾಜರಾಗುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ರಾಜೀನಾಮೆ ನೀಡಿದ ಅತೃಪ್ತ ಶಾಸಕರನ್ನು ಅನರ್ಹಗೊಳಿಸಬೇಕೆಂದು ಕಾಂಗ್ರೆಸ್, ಜೆಡಿಎಸ್ ಸ್ಪೀಕರ್ ಗೆ ಪತ್ರವನ್ನು ಬರೆದಿದೆ. ಇದೇ ವೇಳೆ, ರಾಜೀನಾಮೆ ನೀಡಿದ ಹದಿನೈದು ಶಾಸಕರ ವಿಷಯದಲ್ಲಿ ವಿಪ್ ಅನ್ವಯವಾಗುತ್ತದೆ ಎಂದು ಸ್ಪೀಕರ್ ರೂಲಿಂಗ್ ನೀಡಿದ್ದಾರೆ. ಸುಪ್ರೀಂಕೋರ್ಟಿನ ಅರ್ಜಿಯಲ್ಲಿ ತೀರ್ಪು ಬಂದ ಬಳಿಕ ಬುಧವಾರ ವಿಶ್ವಾಸ ಮತ ಯಾಚನೆ ನಡೆಸೋಣ ಎಂದು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ನಿನ್ನೆ ಸ್ಪೀಕರ್ ಗೆ ಮನವಿ ಮಾಡಿದ್ದರು. ವಿಶ್ವಾಸಮತಕ್ಕೆ ತಾರೀಕು ಸಮಯವನ್ನು ಸೋಮವಾರ ನಿಗದಿಗೊಳಿಸಲಾಗಿತ್ತು. ಆದರೆ ರಾತ್ರೆ ಹನ್ನೆರಡು ಗಂಟೆಯವರೆಗೆ ಸದನ ಮುಂದುವರಿದಿತ್ತು. ಇದೀಗ ಇಂದು ಪುನಃ ಸದನ ಸೇರಿದೆ.












