ಇರಾನಿನ ಹಡಗಿನಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ವಿದೇಶ ಸಚಿವಾಲಯದ ಅಧಿಕಾರಿಗಳು ಭೇಟಿ ಮಾಡಲಿದ್ದಾರೆ

0
483

ಹೊಸದಿಲ್ಲಿ, ಜು. 23: ಜಿಬ್ರಾಲ್ಟರ್ ಜಲಸಂಧಿಯಲ್ಲಿ ಬ್ರಿಟಿಶ್ ಸೈನ್ಯ ಹಿಡಿದಿಟ್ಟಿರುವ ಇರಾನಿಯನ್ ತೈಲ ಹಡಗಿನಲ್ಲಿ ಸಿಕ್ಕಿಬಿದ್ದ ಇಪ್ಪತ್ತನಾಲ್ಕು ಭಾರತೀಯರನ್ನು ವಿದೇಶ ಸಚಿವಾಲಯದ ಅಧಿಕಾರಿಗಳು ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ. ಲಂಡನ್‍ನ ಭಾರತೀಯ ದೂತವಾಸ ನಾಳೆ ಭಾರತೀಯ ಪ್ರಜೆಗಳನ್ನು ಭೇಟಿಯಾಗುತ್ತಾರೆ ಎಂದು ವಿದೇಶ ಸಹ ಸಚಿವ ವಿ. ಮುರಳೀಧರನ್ ಮಾಧ್ಯಮಗಳು ತಿಳಿಸಿದರು.

ಗ್ರೋಸ್ ವನ್ ಎಂಬ ತೈಲ ಹಡಗಿನಲ್ಲಿ 24 ಭಾರತೀಯರಿದ್ದು ಸುರಕ್ಷಿತವಾಗಿದ್ದಾರೆ ಎಂದು ಜಿಬ್ರಾಲ್ಟರ್ ಪೊಲೀಸ್ ಅಧಿಕಾರಿಗಳು ದೃಢಪಡಿಸಿದರು. ಭಾರತದ ಪ್ರಜೆಗಳ ಬಿಡುಗಡೆಗೆ ಸಂಬಂಧಿಸಿದ ಜಿಬ್ರಾಲ್ಟರ್ ಅಧಿಕಾರಿಗಳೊಂದಿಗೆ ಸಂಪರ್ಕ ಇರಿಸಿಕೊಳ್ಳಲಾಗಿದೆ ಎಂದು ವಿದೇಶ ಸಹ ಸಚಿವರು ತಿಳಿಸಿದರು. ಯುರೋಪಿಯನ್ ಯೂನಿಯನ್‍ನ ದಿಗ್ಬಂಧನ ಉಲ್ಲಂಘಿಸಿ ಸಿರಿಯಕ್ಕೆ ತೈಲ ಕಳುಹಿಸಲಾಗುತ್ತಿದೆ ಎಂದು ಆರೋಪಿಸಿ ಜುಲೈ ನಾಲ್ಕರಂದು ಇರಾನಿನ ತೈಲ ಹಡಗನ್ನು ಬ್ರಿಟನ್ ಸೆರೆ ಹಿಡಿದಿತ್ತು.