ವಿಶ್ವಾಸ ಮತ: ರಾಮಲಿಂಗರೆಡ್ಡಿ ಮನಸು ಬದಲು; ಮುಂಬೈಯಲ್ಲಿರುವ ಅತೃಪ್ತರಿಗೆ ಇರಿಸು ಮುರಿಸು

0
533

ಬೆಂಗಳೂರು, ಜು. 18: ವಿಶ್ವಾಸ ಮತ ಯಾಚನೆಯನ್ನು ಮುಖ್ಯಮಂತ್ರಿ ಎಚ್‍ ಡಿ ಕುಮಾರ ಸ್ವಾಮಿ ಮಾಡಿದ್ದು ಬಹುತೇಕ ದೋಸ್ತಿ ಸರಕಾರ ಪತನ ಸನ್ನಿಹಿತವಾಗಿದೆ. ಒಂದು ಲೆಕ್ಕಾಚಾರ ಪ್ರಕಾರ ಕುಮಾರಸ್ವಾಮಿ ಸರಕಾರಕ್ಕೆ 102 ಶಾಸಕರು ಮಾತ್ರ ಇದ್ದಾರೆ. ಇಬ್ಬರು ಪಕ್ಷೇತರ ಶಾಸಕರು ಬಿಜೆಪಿ ಪರ ಇದ್ದಾರೆ. ಹೀಗೆ ಬಿಜೆಪಿ 107 ಶಾಸಕ ಬಲ ಇದ್ದಂಗಾಗಿದ್ದು ಬಹುತೇಕ ದೋಸ್ತಿ ಸರಕಾರ ಪತನವಾಗಬಹುದು.

ಇದೇ ವೇಳೆ ಬೆಂಗಳೂರಿನ ಕಾಂಗ್ರೆಸ್ ಬಲಾಢ್ಯ ರಾಮಲಿಂಗ ರೆಡ್ಡಿ ದೋಸ್ತಿ ಸರಕಾರದ ಪರ ಮತ ಹಾಕುವೆ ಮತ್ತು ಶಾಸಕ ಸ್ಥಾನಕ್ಕೆ ಕೊಟ್ಟ ರಾಜೀನಾಮೆ ಹಿಂಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಯಿಂದ ಸರಕಾರ ಪತನವಾದರೂ ಕಾಂಗ್ರೆಸ್ ನಿರಾಳ ಭಾವದಲ್ಲಿದೆ. ಜೊತೆಗೆ ಸಿದ್ದರಾಮಯ್ಯ ಯಾವುದೇ ಗೊಂದಲವಿಲ್ಲದೆ ವಿಧಾನಸಭೆಗೆ ಆಗಮಿಸಿದ್ದು, ಈ ಸರಕಾರ ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳೂ ವಿಧಾನಸಭೆಯಲ್ಲಿ ನಡೆಯುವ ಚರ್ಚೆಯನ್ನು ಅನ್ವಯಿಸಿದೆ ಎನ್ನಬಹುದು. ಈಗಾಗಲೆ ಮುಂಬೈಯಲ್ಲಿ 12 ಮಂದಿ ಅತೃಪ್ತಶಾಸಕರು ವಿಶ್ವಾಸ ಮತಯಾಚನೆಯಿಂದ ದೂರ ಉಳಿಯುವುದು ಅನಿವಾರ್ಯವಾಗಿದೆ. ರಾಮಲಿಂಗ ರೆಡ್ಡಿಯ ನಿರ್ಧಾರವನ್ನು ನಾವು ಅವಲಂಬಿಸುತ್ತೇವೆ ಎಂದಿದ್ದರೂ ಅವರು ಮುಂಬೈಯಲ್ಲಿ ಕುಳಿತಿರುವುದರಿಂದ ಏನೂ ಮಾಡದ ಸ್ಥಿತಿ ಅವರು ಎದುರಿಸುತ್ತಿದ್ದಾರೆ. ಕಾಂಗ್ರೆಸ್ಸಿನ ಹೆಚ್ಚಿನ ಶಾಸಕರಿಗೆ ದೋಸ್ತಿ ಸರಕಾರದ ಬಗ್ಗೆ ಅಸಮಾಧಾನ ಇರುವುದು ಸುಳ್ಳಲ್ಲ. ಸಿದ್ದರಾಮಯ್ಯ ಸಹಿತ ಕಾಂಗ್ರೆಸ್ ಶಾಸಕರು ವಿಪಕ್ಷದಲ್ಲಿ ಕೂರಲು ಸಿದ್ಧ ಎನ್ನುವ ನಿರ್ಧಾರವನ್ನು ಈ ಹಿಂದೆಯೇ ಪ್ರಕಟಿಸಿದ್ದರು.