ರಾಜ್ಯದಲ್ಲಿ ಇನ್ನು ಖಾಸಗಿ ಬಸ್‍ಗಳಿಗೆ ಹೊಸ ಪರ್ಮಿಟ್ ಇಲ್ಲ!

0
755

ಸನ್ಮಾರ್ಗ ವಾರ್ತೆ

ಬೆಂಗಳೂರು,ಅ.1: ರಾಜ್ಯದಲ್ಲಿ ಖಾಸಗಿ ಬಸ್‍ಗಳಿಗೆ ಹೊಸ ಪರ್ಮಿಟ್ ಕೊಡುವುದಿಲ್ಲ ಎಂದು ರಾಜ್ಯ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷ್‍ಗೆ ಮಾತ್ರ ಹೊಸ ಪರ್ಮಿಟ್ ಕೊಟ್ಟರೆ ಸಾಕು ಎಂದು ಸರಕಾರ ನಿರ್ಧರಿಸಿದೆ.ಇದಕ್ಕೆ ಸಂಬಂಧಿಸಿದ ಅಂತಿಮ ಪ್ರಕಟಣೆ ಸಾರಿಗೆ ಇಲಾಖೆ ನೀಡಿದೆ.

ಕಾಂಟ್ರಾಕ್ಟ್ ಕ್ಯಾರಿಯೇಜ್ ಬಿಟ್ಟು ಪ್ಯಾಸೆಂಜರ್ ಬಸ್ ಪರ್ಮಿಟ್‍ಗಳು ಇನ್ನು ಖಾಸಗಿಗಳಿಗೆ ಲಭ್ಯವಾಗದು. ಪರ್ಮಿಟ್‍ಅನ್ನು ಈಗಾಗಲೇ ಹೊಂದಿರುವ ಬಸ್‍ಗಳು ಬಸ್ ಸರ್ವಿಸ್ ನಡೆಸಬಹುದು. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಇತರ ಜಿಲ್ಲೆಗಳಲ್ಲಿ ಖಾಸಗಿ ಬಸ್‍ಗಳು ಸರ್ವಿಸ್ ನಡೆಸುತ್ತಿವೆ. ಇತರ ಜಿಲ್ಲೆಗಳಲ್ಲಿ ಸರಕಾರಿ ಬಸ್ ಸರ್ವಿಸ್ ಇದೆ.

ಆದರೆ, ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಮಾತ್ರ ಅನುಮತಿ ಇರುವ 21 ರಾಷ್ಟ್ರೀಕೃತ ವಲಯವನ್ನು ವಿಸರ್ಜಿಸಿ ಒಂದೇ ವಲಯವನ್ನಾಗಿ ರೂಪಿಸಿರುವ ಹೊಸ ಪ್ರಕಟಣೆ ಹೊರಬಂದಿದೆ. ಈ ಮೂಲಕ ಕೆಎಸ್‌ಆರ್‌ಟಿಸಿಯ ಅಸ್ತಿತ್ವ ಉಳಿಸಿ ಲಾಭದಲ್ಲಿ ತರಲು ಹೊಸ ಯೋಜನೆ ರೂಪಿಸಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.