ಕರ್ತಾರ್‌ಪುರ್ ಕಾರಿಡಾರ್: ಸಿಖ್ಖ್ ತೀರ್ಥಯಾತ್ರಿಕರ ಮೊದಲ ತಂಡ ಪಾಕಿಸ್ತಾನದಲ್ಲಿ

0
480

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.9:ಕರ್ತಾರ್‌ಪುರ್ ಕಾರಿಡಾರ್ ಮೂಲಕ ಮೊದಲ ಸಿಖ್ ಯಾತ್ರಿಕರ ತಂಡ ಪಾಕಿಸ್ತಾನಕ್ಕೆ ತಲುಪಿದೆ. 500 ಮಂದಿಯ ತಂಡ ಗುರುದ್ವಾರ ದರ್ಬಾರ್ ಸಾಹಿಬ್‍ಗೆ ತೀರ್ಥಯಾತ್ರೆಗೆ ತಲುಪಿತು.

ಪ್ರಧಾನಿ ನರೇಂದ್ರ ಮೋದಿ ಮೊದಲ ತೀರ್ಥಯಾತ್ರಿಕರ ತಂಡಕ್ಕೆ ಹಸಿರು ನಿಶಾನೆ ತೋರಿಸಿದರು. ಕರ್ತಾರ್‌ಪುರ್ ಕಾರಿಡಾರ್ ಎರಡು ದೇಶಗಳ ಗಡಿಯ ಚೆಕ್‍ಪೋಸ್ಟ್‌ಗಳ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನಿರ್ವಹಿಸಲಿದ್ದಾರೆ.

ಪಂಜಾಬ್ ಗುರುದಾಸ್ ಪುರದಿಂದ ದೇರ ಬಾಬಾ ನಾನಕ್‍ನಿಂದ ನಾಲ್ಕು ಕಿಮೀ ದೂರದ ಪಾಕಿಸ್ತಾನದ ನರೋವಲ್ ಜಿಲ್ಲೆಯಲ್ಲಿ ಕರ್ತಾರ್‌ಪುರ್ ದರ್ಬಾರ್ ಸಾಹಿಬ್ ಗುರದ್ವಾರ ಇದೆ. ಸಿಖ್ ಧರ್ಮ ಸಂಸ್ಥಾಪಕ ಗುರುನಾಕ್‍ರ ಸಮಾಧಿ ಅಲ್ಲಿದ್ದು,ಇದು ಸಿಖ್ ವಿಶ್ವಾಸಿಗಳ ಪವಿತ್ರ ಕೇಂದ್ರವಾಗಿದೆ.
ಪ್ರಧಾನಿ ಇಮ್ರಾನ್ ಖಾನ್ ಚರ್ಚೆ ಸಿದ್ಧರಾದ್ದರಿಂದ ಕರ್ತಾರ್‌ಪುರ್ ಗುರುದ್ವಾರಕ್ಕೆ ಕಾರಿಡಾರ್ ನಿರ್ಮಿಸಲು ತೀರ್ಮಾನವಾಗಿತ್ತು. ಪ್ರತಿ ದಿವಸ 5000 ಯಾತ್ರಿಕರು ಗುರದ್ವಾರವನ್ನು ಸಂದರ್ಶಿಸಬಹುದಾಗಿದೆ.