ಕಾಸರಗೋಡು: ರೋಗ ಲಕ್ಷಣವೇ ಇಲ್ಲದ 7 ಮಂದಿಗೆ ಕೊರೊನ ದೃಢ

0
1104

ಸನ್ಮಾರ್ಗ ವಾರ್ತೆ

ಕಾಸರಗೋಡು, ಎ. 2: ಕಾಸರಗೋಡು ಜಿಲ್ಲೆಯಲ್ಲಿ ರೋಗ ಲಕ್ಷಣಗಳಿಲ್ಲದ ಏಳು ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿದೆಯೆಂದು ವರದಿಯಾಗಿದೆ. ದುಬೈಯಿಂದ ಇವರೆಲ್ಲರೂ ಬಂದಿದ್ದರು. ಗಲ್ಫ್ ನಿಂದ ಬಂದವರೆಲ್ಲರನ್ನೂ ಕೊರೊನಾ ತಪಾಸಣೆ ಮಾಡಲಾಗಿತ್ತು. ಆದರೆ, ರೋಗ ಲಕ್ಷಣವೇ ಇಲ್ಲದವರಲ್ಲಿಯೂ ಈಗ ವೈರಸ್ ಬಾಧೆ ಕಂಡು ಬಂದಿದೆ. ಕೆಮ್ಮಾಗಲಿ, ಜ್ವರವಾಗಲಿ ಇವರಿಗೆ ಇರಲಿಲ್ಲ.

ತುಂಬು ಆರೋಗ್ಯಪೂರ್ಣರಾಗಿದ್ದುದು ಮತ್ತು ಪ್ರತಿರೋಧ ಶಕ್ತಿ ಗಟ್ಟಿಯಾಗಿರುವುದೇ ಇವರಲ್ಲಿ ರೋಗದ ಲಕ್ಷಣಗಳು ಕಾಣದಿರಲು ಕಾರಣವೆಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ಎಲ್ಲರಿಗೂ ಕೊರೊನಾ ತಪಾಸಣೆ ಅನಿವಾರ್ಯವೆಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಇಂತಹ ಸೌಲಭ್ಯಗಳೇ ಇಲ್ಲ. ರಾಪಿಡ್ ಟೆಸ್ಟ್ ಮೂಲಕ ಎಲ್ಲರ ತಪಾಸಣೆ ನಡೆಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎಂದು ಕೇರಳದ ಟಿವಿ ಚ್ಯಾನೆಲೊಂದು ವರದಿ ಮಾಡಿದೆ. ಬುಧವಾರ ಕಾಸರಗೋಡು ಜಿಲ್ಲೆಯಲ್ಲಿ ಇನ್ನೂ 12 ಮಂದಿಗೆ ಕೊರೊನಾ ದೃಢಪಟ್ಟಿದೆ.ಒಟ್ಟು 120 ಮಂದಿಯಲ್ಲಿ ರೋಗ ಕಂಡು ಬಂದಿದೆ. ಇದರಲ್ಲಿ 38 ಮಂದಿಗೆ ಇತರರ ಸಂಪರ್ಕದಿಂದ ಕೊರೊನಾ ಹರಡಿದೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.