ಕೊರೊನ: ಮದ್ದು ಪರೀಕ್ಷೆ ಆರಂಭ; ಯಶಸ್ವಿ ಎಂಬ ಶುಭ ಸುದ್ದಿ

0
1513

ಸನ್ಮಾರ್ಗ ವಾರ್ತೆ

ಕ್ಯಾನ್‍ಬರ, ಎ. 2: ಕೊರೊನ ವೈರಸ್‍ ಪೀಡಿತರ ಮೇಲೆ ಪ್ರತಿರೋಧ ಮದ್ದು ಪರೀಕ್ಷೆಯನ್ನು ಆಸ್ಟ್ರೇಲಿಯದ ನ್ಯಾಶನಲ್ ಸೈನ್ಸ್ ಏಜೆನ್ಸಿ ಆರಂಭಿಸಿದೆ. ಕಾಮನ್‍ವೆಲ್ತ್ ಸೈಂಟಿಫಿಕ್ ಆಂಡ್ ಇಂಡಸ್ಟ್ರೀಯಲ್ ರಿಸರ್ಚ್ ಆರ್ಗನೈಝೇಶನ್ (ಸಿಎಸ್‍ಐಆರ್‍ಒ) ಈ ವಿವರ ನೀಡಿದೆ ಎಂದು ಸಿನ್‍ಹುವ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮೆಲ್ಬರ್ನ್‍ನಿಂದ 75 ಕಿಲೊಮೀಟರ್ ದೂರದ ಜಿಲೊಂಗ್‍ನ ಆಸ್ಟ್ರೇಲಿಯದ ಎನಿಮಲ್ ಹೆಲ್ತ್ ಲ್ಯಾಬ್‍ನಲ್ಲಿ ಪರೀಕ್ಷೆ ಆರಂಭವಾಗಿದ್ದು, ಪರೀಕ್ಷೆಗೆ ಮೂರು ವಾರ ತಗಲಲಿದೆ. ಪ್ರತಿರೋಧ ಮದ್ದು ಯಶಸ್ವಿಯಾಗಿದೆ ಎಂದು ಪ್ರಾಥಮಿಕ ಮಾಹಿತಿ ಹೊರಬಂದಿದ್ದು ಈ ಪರೀಕ್ಷೆ ನಿರ್ಣಾಯಕವಾಗಬಹುದು ಎಂದು ಸಿಎಸ್‍ಐಆಒ ಚೀಫ್ ಎಕ್ಸಿಕ್ಯೂಟಿವ್ ಲಾರಿ ಮಾರ್ಷಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮದ್ದು ಫಲಪ್ರದ ಎಂದು ಕಂಡು ಬಂದರೆ 12ರಿಂದ 18 ತಿಂಗಳಲ್ಲಿ ವಿತರಣೆ ಮಾಡಲು ಸಾಧ್ಯವಾಗಬಹುದು. ಕಳೆದ ಜನವರಿಯಲ್ಲಿ ಸಿಎಸೈಆರ್‍ಒ ಕೊರೊನಾ ಪ್ರತಿರೋಧ ಮದ್ದು ಪರೀಕ್ಷೆ ಆರಂಭಿಸಿತ್ತು. ಪ್ರತಿರೋಧ ಮದ್ದು ಅಭಿವೃದ್ಧಿ ಪಡಿಸುವ ಜಾಗತಿಕ ಒಕ್ಕೂಟವಾದ ಕೊಯಲೇಶನ್ ಫಾರ್ ಎಪಿಡೆಕ್ ಪ್ರಿಪಪರ್‍ಡೆನೆಸ್ ಇನ್‍ವೇಶನ್ಸ್ ನೊಂದಿಗೆ ಜಂಟಿಯಾಗಿ ಪ್ರಯೋಗ ಕಾರ್ಯ ನಡೆಯುತ್ತಿದೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.