ಸನ್ಮಾರ್ಗ ವಾರ್ತೆ
ತಿರುವನಂತಪುರಂ, ಮಾ. 23: ಕೊರೊನಾ ವ್ಯಾಪಿಸಿದ್ದನ್ನು ಪರಿಗಣಿಸಿ ಕಾಸರಗೋಡು ಜಿಲ್ಲೆಯನ್ನು ಪೂರ್ಣವಾಗಿ ಬಂದ್ ಮಾಡಲಾಗುವುದು. ಉಳಿದ ಜಿಲ್ಲೆಯಲ್ಲಿ ಅಗತ್ಯಕ್ಕೆ ತಕ್ಕಂತ ಆಂಶಿಕ ಬಂದ್ ಇರಲಿದೆ ಎಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ತೀರ್ಮಾನವಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಯಾರೂ ಮನೆಯಿಂದ ಹೊರಬರಬಾರದೆಂದು ಸೂಚಿಸಲಾಗಿದೆ. ರಾಜ್ಯದಲ್ಲಿ ಬಾರ್ ಗಳು ಸಂಪೂರ್ಣ ಬಂದ್, ಅದರೆ ಕಾಸರಗೋಡು ಜಿಲ್ಲೆಗಳ ಬಿವರೇಜಸ್ ಔಟ್‍ಲೆಟ್‍ಗಳನ್ನು ಮುಚ್ಚುವುದಿಲ್ಲ. ಕಣ್ಣೂರ್, ಕಲ್ಲಿಕೋಟೆ, ಎರ್ನಾಕುಳಂ ಜಿಲ್ಲೆಗಳಲ್ಲಿ ಕಟು ನಿಯಂತ್ರಣ ಹೇರಲು ತೀರ್ಮಾನಿಸಲಾಗಿದೆ. ಸಚಿವರು ಮತ್ತು ಚೀಫ್ ಸೆಕ್ರಟರಿಗಳು, ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಕೇರಳದಲ್ಲಿ ಕೊರೊನ ಪೀಡಿತರು ಹೆಚ್ಚು ಕಂಡು ಬಂದ ಹಿನ್ನೆಲೆಯಲ್ಲಿ ಕಾಸರಗೋಡನ್ನು ಸಂಪೂರ್ಣ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಕೇಂದ್ರ ಸರಕಾರದ ಸೂಚನೆ ಮೇರೆಗೆ ರಾಜ್ಯ ಸರಕಾರ ತೀರ್ಮಾನಿಸಿದೆ. ಕಾಸರಗೋಡು- ಕಣ್ಣೂರ್ ಜಿಲ್ಲಾ ಗಡಿಯನ್ನು ಮುಚ್ಚಿ ಬ್ಯಾರಿಕೇಡ್ ಸ್ಥಾಪಿಸಲಾಗಿದೆ. ಸಣ್ಣ ರಸ್ತೆಗಳನ್ನು ಕೂಡ ಮುಚ್ಚಿಡಲಾಗಿದೆ.












