ಸನ್ಮಾರ್ಗ ವಾರ್ತೆ
ಜಮ್ಮು-ಕಾಶ್ಮೀರ: ಧಾರ್ಮಿಕ ಭಾವನಿಗೆ ಹಾನಿಯೊಡ್ಡಿದ ಪ್ರಕರಣವೊಂದರಲ್ಲಿ ಜಮ್ಮು ಕಾಶ್ಮೀರದ ಬಿಜೆಪಿ ನಾಯಕ ಮಾಜಿ ವಿಧಾನಪರಿಷತ್ ಸದಸ್ಯ ವಿಕ್ರಂ ರಾಂಧವ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ.
ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ಗೆದ್ದದ್ದಕ್ಕೆ ವಿಜಯಾಚರಿಸಿದ ಘಟನೆಯಲ್ಲಿ ರಾಂಧವ ಪ್ರೋಚೋದನಾತ್ಮಕ ವಿಡಿಯೊ ಹೊರಬಿಟ್ಟಿದ್ದಾರೆ. ಅವರ ಈ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ರಾಂಧವ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಭಾರತ ದಂಡ ಸಂಹಿತೆ 295 ಎ, 505(2) ಸೆಕ್ಷನ್ ಪ್ರಕಾರ ಅವರ ಮೇಲೆ ಕೇಸು ದಾಖಲಿಸಲಾಗಿದ್ದು ಬಿಜೆಪಿ ಶಿಸ್ತು ಸಮಿತಿ ವಿವರಣೆ ಕೇಳಿದೆ.












