ಸನ್ಮಾರ್ಗ ವಾರ್ತೆ
ಬೆಂಗಳೂರು: ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನಕ್ಕೆ ನೊಂದು ಬನ್ನೇರು ಘಟ್ಟ ಸಮೀಪದ ಶಾನುಭಾಗನಹಳ್ಳಿಯ ರಾಜೇಂದ್ರ(40) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರವಿವಾರ ಸಂಜೆ ಮನೆಯಲಿ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಪುನೀತ್ ನಿಧನದ ಸುದ್ದಿ ಟಿವಿಯಲ್ಲಿ ಕೇಳಿ ದುಃಖ ತಾಳಲಾಗದೆ ಆತ್ಮಹತ್ಯೆ ಈತ ಮಾಡಿಕೊಂಡ ಎಂದು ಪೊಲೀಸರು ತಿಳಿಸಿದರು. ಮೃತನ ಆಗ್ರಹ ಪ್ರಕಾರ ಅವನ ಕುಟುಂಬ ಅವನ ಕಣ್ಣುಗಳನ್ನು ದಾನ ನೀಡಿತು.
ತಾನು ಮೃತಪಟ್ಟರೆ ತನ್ನ ಕಣ್ಣುಗಳನ್ನು ದಾನ ಮಾಡಬೇಕೆಂದು ರಾಜೇಂದ್ರ ಪತ್ನಿ, ತಾಯಿಗೆ ಹೇಳಿದ್ದ. ಅಕ್ಟೋಬರ್ 28ಕ್ಕೆ ಕುಟುಂಬವನ್ನು ಕರೆದುಕೊಂಡು ತಿರುಪತಿಗೆ ಹೋಗಿದ್ದಾಗ ಪುನೀತ್ನ ಸಾವು ಸುದ್ದಿ ಆತನಿಗೆ ತಿಳಿದಿದ್ದು, ನಂತರ ಪ್ರಯಾಣ ಮೊಟಕುಗೊಳಿಸಿ ಮನೆಗೆ ಮರಳಿದ್ದಾನೆ. ರವಿವಾರ ಬೆಳಗ್ಗಿನವರೆಗೆ ಪುನೀತ್ರ ಅಂತಿಮ ಸಂಸ್ಕಾರವನ್ನು ಟಿವಿಯಲ್ಲಿ ನೋಡಿದ್ದಾನೆ. ಸಂಜೆ, ಪತ್ನಿ ಮತ್ತು ತಾಯಿ ಬಟ್ಟೆತೊಳೆದು ಕೊಂಡು ಬರಲು ಹೊರಗೆ ಹೋಗಿದ್ದರು. ಆ ಸಂದರ್ಭದಲ್ಲಿ ನೇಣುಹಾಕಿಕೊಂಡಿದ್ದಾನೆ. ಪುನೀತ್ ಸಾವಿಗೆ ನೊಂದು 5 ಮಂದಿ ಅಭಿಮಾನಿಗಳು ಈವರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.












