ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ.11: ಭೂಸೇನೆಯ ಪ್ರಮುಖ ಜನರಲ್ ಮುಕುಂದ್ ನರವಣ್ ಶನಿವಾರ ತನ್ನ ಮೊದಲ ಪತ್ರಿಕಾಗೋಷ್ಠಿಯಲ್ಲಿ ದೊಡ್ಡ ಹೇಳಿಕೆ ನೀಡಿದ್ದಾರೆ. ಇಡೀ ಜಮ್ಮು ಕಾಶ್ಮೀರ ಭಾರತದ ಭಾಗವಾಗಿದೆ. ಸಂಸತ್ತು ಒಂದುವೇಳೆ ಬಯಸುವುದಾದರೆ ಪಾಕ್ ಆಕ್ರಮಿತ ಕಾಶ್ಮೀರ ಕೂಡ ನಮ್ಮದಾಗುವುದು ಎಂದು ಅವರು ಹೇಳಿದರು. ಒಂದುವೇಳೆ ಸಂಸತ್ತಿನಿಂದ ಆದೇಶ ಬಂದರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸಲು ಸಿದ್ಧ ಎಂದರು.
ಇದೇವೇಳೆ ಅವರು ಮೂರು ಸೇನೆಯ ಪ್ರಮುಖ ರಕ್ಷಣಾ ಅಧ್ಯಕ್ಷ ಸಿಡಿಎಸ್ ಸ್ಥಾನ ಸೃಜಿಸಿದ್ದನ್ನು ಬಹುದೊಡ್ಡ ಹೆಜ್ಜೆ ಎಂದು ಅವರು ಹೇಳಿದರು. ಇದು ಸೇನೆಯ ಯಶಸ್ಸನ್ನು ಸುನಿಶ್ಚಿತಗೊಳಿಸಲಿದೆ. ಸಂವಿಧಾನದಲ್ಲಿ ನಿಷ್ಠೆ ಎಲ್ಲ ಸಮಯದಲ್ಲಿ ನಮಗೆ ಮಾರ್ಗದರ್ಶನ ನೀಡಲಿದೆ. ಸಂವಿಧಾನದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸೌಹಾರ್ದ ನಮಗೆ ಮಾರ್ಗದರ್ಶನ ನೀಡುತ್ತಿದೆ. ನಾವೀಗ ತರಬೇತಿಯತ್ತ ಹೆಚ್ಚು ಧ್ಯಾನ ನೀಡುತ್ತಿದ್ದೇವೆ ಮತ್ತು ಭವಿಷ್ಯದಲ್ಲಿ ಯುದ್ಧ ಪರಿಸ್ಥಿತಿ ಸೃಷ್ಟಿಯಾದರೆ ಅದಕ್ಕೆ ಸಿದ್ಧರಾಗಿರುವುದು ಮುಖ್ಯವಾಗಿದೆ ಎಂದರು.












