ಸನ್ಮಾರ್ಗ ವಾರ್ತೆ
ಕುವೈಟ್ ಸಿಟಿ, ಜ.11: ಕುವೈಟ್ ಅಮೀರ್ ಶೇಖ್ ಸಬಾಹ್ ಅಲ್ಲ ಅಹ್ಮದ್ ಅಲ್ ಜಾಬಿರ್ ಅಸ್ಸಬಾಹ್ರ ಶಾಂತಿ ಯತ್ನಗಳನ್ನು ಪೋಪ್ ಫ್ರಾನ್ಸಿಸ್ ಪ್ರಶಂಸಿದರು. ಜಗತ್ತಿನ ಸಂಘರ್ಷ ಪರಿಸ್ಥಿತಿಯಲ್ಲಿ ಸಾಗುತ್ತಿದ್ದು ಕೈವೆಟ್ ಅಮೀರ್ ಹೊಸ ಮಾದರಿಯನ್ನು ಹಾಕಿಕೊಟ್ಟಿದ್ದಾರೆ ಎಂದು ಪೋಪ್ ಹೇಳಿದರು. ಇತರರನ್ನು ಗೌರವಿಸಿ, ವಿವಾದಗಳಿಗೆ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಲು ಅಮೀರ್ ಶ್ರದ್ಧೆ ವಹಿಸಿದರು. ಮಾನವೀಯ ಸೇವಾ ಕ್ಷೇತ್ರದಲ್ಲಿ ಅಮೀರ್ ಗಮನಾರ್ಹ ಕೆಲಸ ಮಾಡಿದರು. ಸ್ಥಿರತೆ, ಶಾಂತಿ ಒಳಿತು ಜಗತ್ತಿನಲ್ಲಿ ಸ್ಥಾಪಿಸಲ್ಪಡಬೇಕೆಂದು ಶೇಖ್ ಸಬಾಹ್ ಅಲ್ ಅಹ್ಮದ್ ಅಲ್ ಜಾಬಿರ್ ಅಸ್ಸಬಾಹ್ರ ಉದ್ದೇಶವಾಗಿದ್ದು ಇತತರರನ್ನು ಬೆಂಬಲಿಸುವುದು ಅವರ ಗುಣವೆಂದು ಪೋಪ್ ಏಳಿದರು.
ಮಧ್ಯಪ್ರಾಚ್ಯದ ಸವಾಲು, ಯುದ್ಧಭೀತಿಯ ಬದಲು ಇರಾಕಿನ ಪುನರ್ನಿರ್ಮಾಣ ಪ್ರಯತ್ನ ನಡೆಯಬೇಕೆಂದು ಸ್ವಿಟ್ ಝರ್ ಲಾಂಡ್ ನಲ್ಲಿ ವ್ಯಾಟಿಕನ್ ನಾನ್ ರೆಡಿಡೆಂಟ್ ಕುವೈಟ್ ರಾಯಭಾರಿ ಬದರ್ ಅಲ್ ತುನೈಬ್ ನೀಡಿದ ಔತಣ ಕೂಟದಲ್ಲಿ ಭಾಗವಹಿಸಿ ಪೋಪ್ ಫ್ರಾನ್ಸಿಸ್ ಹೇಳಿದರು.












