ಕೇರಳ ರಾಮರಾಜ್ಯ, ಉತ್ತರಪ್ರದೇಶ ಯಮರಾಜ್ಯ; ಆಡಳಿತ ನಿರ್ವಹಣೆಯ ಪ್ರಶಸ್ತಿ ಬೆಟ್ಟು ಮಾಡುತ್ತಿದೆ- ಪ್ರಶಾಂತ್ ಭೂಷಣ್

0
860

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.31: ದೇಶದಲ್ಲಿ ಅತ್ಯುತ್ತಮ ಆಡಳಿತ ನಿರ್ವಹಣೆಯ ದೊಡ್ಡ ರಾಜ್ಯ ಕೇರಳವೆಂದು ಪಬ್ಲಿಕ್ ಅಫೇರ್ಸ್ ಇಂಡಕ್ಸ್ ವರದಿಯನ್ನು ಬೆಟ್ಟು ಮಾಡಿ ಹಿರಿಯ ವಕೀಲ, ಸಮಾಜ ಸೇವಕ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ. ಇದೇ ವರದಿಯಲ್ಲಿ ಅತ್ಯಂತ ಕೆಳಗೆ ಉತ್ತರ ಪ್ರದೇಶದ ಸ್ಥಾನವಿದೆ. ಈ ವಿರೋಧಾಭಾಸವನ್ನು ತೋರಿಸಿ ಕೇರಳವನ್ನು ರಾಮರಾಜ್ಯವೆಂದು ಉತ್ತರಪ್ರದೇಶವನ್ನು ಯಮರಾಜ್ಯವೆಂದು ಭೂಷಣ್ ಟ್ವೀಟ್ ಮಾಡಿದ್ದಾರೆ.

ಕೇರಳದಲ್ಲಿ ಉತ್ತಮ ಆಡಳಿತವಿದೆ. ಉತ್ತರ ಪ್ರದೇಶದಲ್ಲಿ ಅತ್ಯಂತ ಕೆಟ್ಟ ಸ್ಥಿತಿಯಿದೆ ಎಂದು ಪಬ್ಲಿಕ್ ಅಪೇರ್ಸ್ ಇಂಡಕ್ಸ್ ವರದಿ ಮಾಡಿದೆ.

ಇದು ಮಾಜಿ ಇಸ್ರೋ ಅಧ್ಯಕ್ಷ ಕೆ.ಕಸ್ತೂರಿ ರಂಗನ್‍ರ ಅಧ್ಯಕ್ಷತೆಯ ಸ್ವತಂತ್ರ ಸಂಘಟನೆಯಾಗಿದೆ. ಅದು ನಡೆಸಿದ ಅಧ್ಯಯನದಲ್ಲಿ ದೊಡ್ಡ ರಾಜ್ಯಗಳಲ್ಲಿ ಪ್ರಥಮ ಸ್ಥಾನವನ್ನು ಕೇರಳ ಪಡೆದುಕೊಂಡರೆ ಉತ್ತರಪ್ರದೇಶ ಕೊನೆಯ ಸ್ಥಾನ ಗಳಿಸಿದೆ. ಉತ್ತಮ ಆಡಳಿತ ನಿರ್ವಹಣೆಯ ದೊಡ್ಡ ರಾಜ್ಯಗಳಲ್ಲಿ ಪ್ರಥಮ ನಾಲ್ಕು ಸ್ಥಾನಗಳು ದಕ್ಷಿಣ ಭಾರತದ ರಾಜ್ಯಗಳಿವೆ.

ಕೇರಳಕ್ಕೆ 1.388 ಇಂಡಕ್ಸ್ ಪಾಯಿಂಟು, ತಮಿಳ್ನಾಡಿಗೆ 0.912 , ಆಂಧ್ರಕ್ಕೆ 0.531 ಮತ್ತು ಕರ್ನಾಟಕಕ್ಕೆ 0.468 ಪಾಯಿಂಟುಳು ಲಭಿಸಿದೆ. ಉತ್ತರ ಪ್ರದೇಶ ಅತ್ಯಂತ ಕೆಳಗಿದೆ. ಒಡಿಸ್ಸ, ಬಿಹಾರ ಉತ್ತರ ಪ್ರದೇಶಕ್ಕಿಂತ ಮೇಲಿವೆ.

ಇವು ಮೂರಕ್ಕೂ ಇಂಡಕ್ಸ್‌ನಲ್ಲಿ ನೆಗೆಟಿವ್ ಪಾಯಿಂಟು ಲಭಿಸಿದ್ದು, ಸಣ್ಣ ರಾಜ್ಯಗಳಲ್ಲಿ ಗೋವಾ ಪ್ರಥಮ ಸ್ಥಾನಿಯಾಗಿದೆ. ಮೇಘಾಲಯಕ್ಕೆ ಎರಡನೇ ಸ್ಥಾನವಿದೆ. ಹಿಮಾಚಲ ಪ್ರದೇಶಕ್ಕೆ ಮೂರನೇ ಸ್ಥಾನ. ಸಣ್ಣರಾಜ್ಯ ಮಣಿಪುರ, ದಿಲ್ಲಿ, ಉತ್ತರಾಖಂಡ ನೆಗೆಟಿವ್ ಪಾಯಿಂಟುಗಳಿಂದ ಅತ್ಯಂತ ಹಿಂದುಳಿದಿವೆ.