ಮಹಿಳೆಯರು ಮನೆಯಲ್ಲಿರಬೇಕಾದವರು; ಕೆಲಸಕ್ಕೆ ಬಂದ ಮೇಲೆ ಮೀ ಟೂ ಆರಂಭವಾಯ್ತು- ಮುಖೇಶ್ ಖನ್ನಾ ವಿವಾದಾತ್ಮಕ ಹೇಳಿಕೆ

0
530

ಸನ್ಮಾರ್ಗ ವಾರ್ತೆ

ಮುಂಬೈ,ಅ.31: ಒಂದು ತಲೆಮಾರಿನಲ್ಲಿ ಜನಪ್ರಿಯತೆ ಗಳಿಸಿದ ಶಕ್ತಿಮಾನ್ ಸರಣಿಯ ಪ್ರಸಿದ್ಧ ನಟ ಮುಖೇಶ್ ಖನ್ನಾ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ.

ಮುಖೇಶ್ ಖನ್ನಾ ಮೀ ಟೂ ಮೂವ್‍ಮೆಂಟ್ ಕುರಿತು ಮಾತಾಡಿದ ವೀಡಿಯೊ ಹೊರಬಂದಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು ಮಹಿಳೆಯರು ಮನೆಕೆಲಸ ನೋಡಿಕೊಳ್ಳಬೇಕಾದವರು. ಅವರು ಹೊರಗಿಳಿದು ಕೆಲಸ ಮಾಡಲು ಶುರುವಾಗುವುದರೊಂದಿಗೆ ಮೀ ಟೂ ಸಮಸ್ಯೆ ಸೃಷ್ಟಿಯಾಗಿದ್ದು ಎಂದು ಮುಖೇಶ್ ಹೇಳಿದ್ದರು.

ಮನೆ ಪರಿಪಾಲಿಸುವುದು ಮಹಿಳೆಯರ ಕೆಲಸವಾಗಿದೆ. ಮಹಿಳೆಯರು ಕೆಲಸ ಮಾಡಲು ಆರಂಭಿಸಿದ್ದರಿಂದ ಮೀ ಟೂ ಮೂವ್‍ಮೆಂಟ್ ಸಮಸ್ಯೆ ಹುಟ್ಟಿಕೊಂಡಿದೆ. ಇಂದು ಮಹಿಳೆಯರು ಮಾತಾಡುತ್ತಿರುವುದು ಪುರಷರ ತೋಳಿಗೆ ತೋಳಿಟ್ಟು ಎಂದು ಮುಖೇಶ್ ಖನ್ನ ಹೇಳುತ್ತಿದ್ದಾರೆ. ವೀಡಿಯೊ ಕ್ಲಿಪ್ ಹೊರಬರುವುದರೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಭಟನೆ ಕಾಣಿಸಿಕೊಂಡಿದೆ.

ಮುಖೇಶ್‍ರ ಮಾತುಗಳು ಪ್ರತಿಭಟನಾರ್ಹ ಮತ್ತು ನಿರಾಶಜನಕವೆಂದು ಪ್ರತಿಕ್ರಿಯಿಸಿದ್ದಾರೆ. ಸೂಪರ್ ಹೀರೊ ಆಗಿ ಲೆಕ್ಕ ಮಾಡಲಾಗಿದ್ದ ನಟ ನಿರಾಶೆ ಸೃಷ್ಟಿಸಿದ್ದಾರೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೂಪರ್ ಹೀರೋ ಶಕ್ತಿಮಾನ್ ಕಥೆಯ ಸರಣಿಯಲ್ಲಿ ಶಕ್ತಿಮಾನ್ ಆಗಿ ಮುಖೇಶ್ ಖನ್ನ ನಟಿಸಿದ್ದರು. ಮಹಾಭಾರತದಲ್ಲಿ ಭೀಷ್ಮ ಪಾತ್ರವನ್ನು ಮಾಡಿದ್ದರು.