ಕೃಷಿ ಕಾನೂನು ವಿರೋಧಿಸಿ ಸುಖ್‍ಬೀರ್ ಸಿಂಗ್ ಬಾದಲ್‍ ನೇತೃತ್ವದಲ್ಲಿ ಬೃಹತ್ ಕಿಸಾನ್ ರ‌್ಯಾಲಿ

0
365

ಸನ್ಮಾರ್ಗ ವಾರ್ತೆ

ಅಮೃತಸರ,ಅ.1: ಕೇಂದ್ರ ಸರಕಾರದ ಕೃಷಿ ಕಾನೂನು ವಿರುದ್ಧ ಶಿರೋಮಣಿ ಅಕಾಲಿದಳ ಬೃಹತ್ ಕಿಸಾನ್(ರೈತ) ರ‌್ಯಾಲಿ ನಡೆಸಿದೆ. ಅಕಾಲಿದಳ ಅಧ್ಯಕ್ಷ ಸುಖ್‍ಬೀರ್ ಸಿಂಗ್ ಬಾದಲ್ ಅಮೃತಸರದಲ್ಲಿ ಕಿಸಾನ್ ರ‌್ಯಾಲಿಗೆ ನೇತೃತ್ವವನ್ನು ನೀಡಿದ್ದಾರೆ. ತಲ್‍ವಂಡಿ ಸಾಬೊದಿಂದ ಆನಂದಪುರ ಸಾಹಿಬ್‍ನಿಂದ ಬರುವ ರ‌್ಯಾಲಿಯು ಮೊಹಾಲಿಯಲ್ಲಿ ಸೇರಲಿವೆ.

ರೈತರ ವಿರುದ್ಧ ಕರಾಳ ಕಾನೂನುಗಳನ್ನು ಹಿಂಪಡೆಯಲು ಬಿಜೆಪಿ ಸರಕಾರ ತಯಾರಾಗಲಿ ಎಂದು ಸುಖ್‍ಬೀರ್ ಸಿಂಗ್ ಬಾದಲ್ ಆಗ್ರಹಿಸಿದರು. ಪಾರ್ಲಿಮೆಂಟು ಅಧಿವೇಶನವನ್ನು ಪುನಃ ಕರೆಯಬೇಕು. ರೈತರಿಗೆ ಮೋಸ ಮಾಡುವ ಕೃಷಿ ಕಾನೂನುಗಳನ್ನು ವಾಪಾಸು ಪಡೆಯಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸಿ ಕೇಂದ್ರ ಸರಕಾರ ಮತ್ತು ರಾಷ್ಟ್ರಪತಿಗೆ ರಾಜ್ಯಪಾಲರ ಮೂಲಕ ಮನವಿ ಸಲ್ಲಿಸುವುದಾಗಿ ಬಾದಲ್ ಹೇಳಿದರು. ಕಳೆದ ಒಂದು ವಾರದಿಂದ ಪಂಜಾಬ್ ಹರಿಯಾಣದಲ್ಲಿ ತೀವ್ರ ರೈತ ಪ್ರತಿಭಟನೆ ನಡೆಯುತ್ತಿದೆ.