ಸನ್ಮಾರ್ಗ ವಾರ್ತೆ
ಲೇಖಕರು: ಸುಹೈಲ್ ಉಪ್ಪಿನಂಗಡಿ
ಕೆಎಂ ರಿಯಾಲುರವರದ್ದು ಅನುಪಮ ವ್ಯಕ್ತಿತ್ವ. ಪ್ರಾಕ್ಟಿಕಲ್ ದಾವಾದಲ್ಲಿ ಅದೆಷ್ಟೋ ಗ್ರಾಮಗಳು ಇವರಿಂದಾಗಿ ಇಸ್ಲಾಮಿಗೆ ಬಂದಿವೆ. ಇವರು ಮಹಾ ವಿದ್ವಾಂಸರಲ್ಲವಾದರೂ ಇವರಿಗೆ ವಾಕ್ಚುತರ್ಯವಿದೆ. ಇದೇ ಆಯುಧದಿಂದ ಅವರು ಯಾರನ್ನೂ ಯಾವ ವಿಷಯದ ಕುರಿತಾಗಿಯೂ ಕನ್ವಿನ್ಸ್ ಮಾಡಬಲ್ಲವರಾಗಿದ್ದರು. ಆಲಿಯಾ ಮಹಾ ವಿದ್ಯಾಲಯದ ಸಂಸ್ಥಾಪಕರಾದ ಮರ್ಹೂಮ್ ಇಝ್ಝುದ್ದೀನ್ ಮೌಲವಿಯವರು ಆಲಿಯಾ ಸಂಕಷ್ಟದ ದಿನವನ್ನು ಎದುರಿಸುತ್ತಿದ್ದಾಗ ಮನ್ ಅನ್ಸಾರೀ ಇಲಲ್ಲಾಹ್ (ಅಲ್ಲಾಹನ ಸಹಾಯಕ್ಕೆ ಯಾರಿದ್ದಾರೆ) ಎಂಬ ವಾಕ್ಯದೊಂದಿಗೆ ಆರಂಭಿಸುವ ಓಲೆಯೊಂದನ್ನು ಕುವೈತ್ಗೆ ಕಳುಹಿಸಿದ್ದರು. ಅದಕ್ಕೆ ಉತ್ತರವಾಗಿ ಅದೇ ಭಾಷೆಯಲ್ಲಿ ನಹ್ನು ಅನ್ಸಾರುಲ್ಲಾಹ್ (ನಾವು ಅಲ್ಲಾಹನ ಸಹಾಯಕರಾಗಿದ್ದೇವೆ) ಎಂದು ಉತ್ತರ ಕಳುಹಿಸಿದ್ದರು. ಇದರ ಬಳಿಕ ಆಲಿಯಾ ಕಾಲೇಜಿನ ಮೇನೇಜಿಂಗ್ ಕಮಿಟಿ ಸದಸ್ಯರಾದರು.
ದಾವಾ ವಿಷಯಕ್ಕೆ ಸಂಬಂಧಿಸಿದ ತರಗತಿಗಳು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಕೂಡಿರುತ್ತಿದ್ದವು. ಇವರ ದಾವಾ ವೈಜ್ಞಾನಿಕ ಅಂಶಗಳಿಂದ ಕೂಡಿರದಿದ್ದರೂ ಸರಳ ಹಾಗೂ ಪ್ರಾಯೋಗಿಕ ಅಂಶಗಳಿಂದ ಕೂಡಿರುತ್ತಿದ್ದವು. ಎಲ್ಲಿ ನೆಲೆಸುತ್ತಾರೋ ಅಲ್ಲಿಯ ಭಾಷೆ ಮತ್ತು ಸಂಸ್ಕೃತಿಗೆ ಒಗ್ಗಿಕೊಳ್ಳುತ್ತಿದ್ದರು.
ದಾವಾ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ದಾವಾ ತೋರಿಸಲು ತಮಿಳುನಾಡಿಗೆ ಕರೆದು ಕೊಂಡು ಹೋಗಿ ಒಂದು ವಾರದ ತನಕ ಅವರಿಗೆ ಬೇಕಾದ ಸಾಧನಾನುಕೂಲತೆಗಳ ವ್ಯವಸ್ಥೆ ಕಲ್ಪಿಸುತ್ತಿದ್ದರು. ಇವರು ಮಹಾ ವಿದ್ವಾಂಸರಾಗಿರಲಿಲ್ಲವಾದರೂ ಅನೇಕ ವಿದ್ವಾಂಸರಿಗೆ ಸಾಧ್ಯವಾಗದ ಕೆಲಸ ಇವರೊಬ್ಬರೇ ಮಾಡಿದ್ದಾರೆ. ಮೊದಲು ಜಮಾಅತೆ ಇಸ್ಲಾಮಿಯಲ್ಲಿದ್ದರು. ದಾವಾ ವಿಚಾರವಾಗಿ ತಮ್ಮದೇ ಶೈಲಿಯ ವಿಚಾರವಾಗಿ ಸಂಘಟನೆಯಿಂದ ಹೊರ ಹೋದರೆಂಬುದು ನನ್ನ ನೆನಪು.
ಮರಣದ ತನಕವೂ ಇಸ್ಲಾಮಿನ ಬೋಧಕರಾಗಿದ್ದರು. ಮೇ ತಿಂಗಳ ಕೊನೆಯ ವಾರ ಮಗ ಡಾಕ್ಟರ್ ಶುಐಬ್ರವರ ಮನೆಯಲ್ಲಿದ್ದಾಗ ತಾನು ಅಂತಿಮವಾಗಿ ನಿದ್ರಿಸಬೇಕಾದ ಘೋರಿಯ ಸ್ಥಳ ಸೂಚಿಸಿದ್ದರು. ಮೇ ತಿಂಗಳ ಕೊನೆಯಲ್ಲಿ ಮಗನೊಂದಿಗೆ ಖಬರಸ್ಥಾನ ದಲ್ಲಿ ತಾನು ನಿದ್ರಿಸಲು ಸ್ಥಳವನ್ನು ಗೊತ್ತುಪಡಿಸುವ ಹಿನ್ನೆಲೆಯ ಭಾವಚಿತ್ರವನ್ನೊಮ್ಮೆ ನೋಡುವಾಗ ಮಾಡಬೇಕಾದ ಕೆಲಸವನ್ನು ಮಾಡಿ ಮುಗಿಸಿದ ಬಳಿಕ ಸೃಷ್ಟಿಕರ್ತನನ್ನು ಆದಷ್ಟು ಬೇಗ ಭೇಟಿಯಾಗುವ ತವಕ ಖಬರ್ ಗೊತ್ತು ಪಡಿಸುವಾಗ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು ಎಂಬಂತೆ ಭಾಸವಾಯ್ತು.
ಬಹಳ ಸಮರ್ಥ ವ್ಯಕ್ತಿ. ಸಮರ್ಪಿತ ಇಸ್ಲಾಮಿಕ್ ಕೆಲಸಗಾರನನ್ನು ಹೊರತುಪಡಿಸಿ ಉತ್ತಮ ಉದ್ಯಮಿ. ಎಸ್ಐಓ ಬೆಂಗಳೂರು ಸಮ್ಮೇಳನದಲ್ಲಿ ಸೇವಾಕಾರ್ಯಕರ್ತರಾಗಿದ್ದ ಅವರು ಕೇರಳ ತಂಡದ ಮುಖ್ಯಸ್ಥರಾಗಿದ್ದರು. ಬೆಂಗಳೂರಿನ ತೀವ್ರ ಚಳಿಯ ವಾತಾವರಣದಲ್ಲಿ ಅವರು ಕೈಯಲ್ಲಿ ದೊಡ್ಡ ಕೋಲನ್ನು ಹಿಡಿದುಕೊಂಡು ತಂಡದೊಂದಿಗೆ ಮಧ್ಯರಾತ್ರಿಯಲ್ಲಿ ಭದ್ರತಾ ಸೇವೆಗಳನ್ನು ನೀಡುತ್ತಿರುವುದನ್ನು ನಾನು ನೋಡಿದ್ದೇನೆ. ನಾನು ಅವರನ್ನು ಮಂಗಳೂರು, ಕ್ಯಾಲಿಕಟ್ ಮತ್ತು ಕುವೈತ್ನಲ್ಲಿ ಭೇಟಿಯಾಗಿದ್ದೆ. ಅಲ್ಲಾಹನು ಅವರಿಗೆ ಸ್ವರ್ಗದ ಸ್ಥಾನವನ್ನು ನೀಡಲಿ ಎಂದು ಅವರ ವ್ಯಕ್ತಿತ್ವದ ಕುರಿತು ಶರ್ಫುದ್ದೀನ್ ಸೂಫೀಯವರು ಹೇಳಿದ್ದಾರೆ. ಮಂಗಳೂರಿನ’ಇಸ್ಮಿಕಾ’ ಅವರೇ ಸೂಚಿಸಿದ ಹೆಸರು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












