ಕೋರೊನದಿಂದಾಗಿ ಏಮ್ಸ್ ವೈದ್ಯಕೀಯ ಪರೀಕ್ಷೆಗಳಿಗೆ ಸಂಕಷ್ಟ; ಅತಂತ್ರ ಸ್ಥಿತಿಯಲ್ಲಿ ಜೂನಿಯರ್ ವೈದ್ಯರು ಮತ್ತು ನರ್ಸ್‌ಗಳು

0
435

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ. 9: ಕೊರೋನದೊಂದಿಗೆ ಹೋರಾಡುತ್ತಿರುವ ಜೂನಿಯರ್ ವೈದ್ಯರಿಗೆ ಮತ್ತು ನರ್ಸ್‍ಗಳಿಗೆ ಆಲ್ ಇಂಡಿಯ ಇನ್ಸ್ಟಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ ‌ನ ಸ್ನಾತಕೊತ್ತರ ಪದವಿ ಪ್ರವೇಶ ಪರೀಕ್ಷೆಗೆ ಸಮಯವಕಾಶ ಇಲ್ಲದಾಗುತ್ತಿದೆ. ಕೊರೋನ ರೋಗಿಗಳ ಸಂಪರ್ಕ ಇಲ್ಲ. ರೋಗ ಲಕ್ಷಣಗಳಿಲ್ಲ ಎಂದು ಅಫಿದಾವಿತ್ ಬರೆದು ಕೊಟ್ಟರೆ ಮಾತ್ರ ಪರೀಕ್ಷೆ ಬರೆಯಲು ಸಾಧ್ಯ. ತಪ್ಪು ವಿವರ ನೀಡಿದರೆ ಕಾನೂನು ಕ್ರಮ ಎದುರಿಸಬೇಕಾಗುವುದು. ಇದರೊಂದಿಗೆ ದೇಶದಲ್ಲಿ ಶೇ. 70ರಷ್ಟು ಮಂದಿಗೆ ಅವಕಾಶ ನಷ್ಟವಾಗಲಿದೆ.

ಏಮ್ಸ್ ಸ್ನಾತಕೋತ್ತರ ಪದವಿ ನರ್ಸಿಂಗ್, ಎಂಟಿ, ಎಂಎಸ್, ಸ್ಪೇಶ್ಯಾಲಿಟಿ ಡಿಎಂ, ಎಂಸಿಎಚ್ ಕೋರ್ಸ್‍ಗಳಿಗೆ ಏಮ್ಸ್ ಪ್ರತೀ ವರ್ಷ ಪರೀಕ್ಷೆ ನಡೆಸುತ್ತಿದೆ. ಹಲವಾರು ಜೂನಿಯರ್ ವೈದ್ಯರು, ಈಗ ಉದ್ಯೋಗ ಮಾಡುವವರು ದೇಶದಲ್ಲಿ 150 ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಾರೆ. ಆದರೆ ಕೊರೋನದ ಹಿನ್ನೆಲೆಯಲ್ಲಿ ರೋಗಲಕ್ಷಣಗಳು ಇಲ್ಲ ಎಂದೂ ಮತ್ತು ಸೋಂಕು ಇದ್ದವರೊಂದಿಗೆ ಸಂಪರ್ಕ ಇಲ್ಲ ಎಂದು ಅಫಿದಾವಿತ್ ಮಾಡಬೇಕಾಗಿದೆ. ತದನಂತರವೇ ಪರೀಕ್ಷೆ ಬರೆಯುವುದು ಸಾಧ್ಯ ಎಂದು ಏಮ್ಸ್ ಹೇಳಿದೆ. ಕೊರೋನ ವಿರುದ್ಧ ಮುಂಚೂಣಿಯಲ್ಲಿ ಹೋರಾಟ ನಿರತ ಹಲವು ವೈದ್ಯರು ಪ್ರವೇಶ ಪರೀಕ್ಷೆಯನ್ನು ಕಳೆದುಕೊಳ್ಳಲಿದ್ದಾರೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.