ಐಪಿಎಲ್ ರದ್ದಾದ ಬಳಿಕ ಸಮಾಜ ಸೇವೆಗಿಳಿದ ಕ್ರಿಕೆಟಿಗ ವಿರಾಟ್ ಕೊಹ್ಲಿ

0
439

ಸನ್ಮಾರ್ಗ ವಾರ್ತೆ

ಮುಂಬೈ: ಆಟಗಾರರಲ್ಲಿ ಕೊರೋನಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯಾಟವನ್ನು
ಮುಂದೂಡಲಾಗಿರುವಂತೆಯೇ ಇತ್ತ ವಿರಾಟ್ ಕೊಹ್ಲಿ ತನ್ನ ಫೌಂಡೇಶನ್ ನ ಬ್ಯಾನರಿನಡಿಯಲ್ಲಿ
ಕೊರೋನಾ ಹಿನ್ನೆಲೆಯಲ್ಲಿ ಸಮಾಜ ಸೇವಾ ಕಾರ್ಯಕ್ಕೆ ಇಳಿದಿದ್ದಾರೆ.

ತನ್ನ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ರ ಜೊತೆಗೂಡಿ ಅವರು ಈ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಕೊಹ್ಲಿಯವರ ಸೇವೆಯ ಬಗ್ಗೆ ಟ್ವೀಟ್ ಮಾಡಿರುವ ಮುಂಬಯಿಯ ಯುವಸೇನೆಯ ರಾಹುಲ್.‌ಎನ್. ಕನಾಲ್ ನಾಯಕ ಕೊಹ್ಲಿಯವರ ಫೋಟೋ ಹಂಚಿಕೊಂಡಿದ್ದಾರೆ.

ಮುಂಬೈಯಲ್ಲಿ ಕೊರೋನಾ
ಪೀಡಿತರಿಗೆ ಆಹಾರದ ವ್ಯವಸ್ಥೆಗಳನ್ನು ಮಾಡುವ ಕೆಲಸದಲ್ಲಿ ಸದ್ಯ ಕೊಹ್ಲಿ ಮತ್ತವರ ಪತ್ನಿ ನಿರತರಾಗಿದ್ದಾರೆ.

ಪಂದ್ಯಾಟದ ನಡುವೆ ಆಟಗಾರರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯವನ್ನು ರದ್ದುಪಡಿಸಲಾಗಿತ್ತು. ಬಹಳ ಸುರಕ್ಷಿತವೆಂದು ಹೇಳಲಾಗುತ್ತಿದ್ದ ಬಯೋ ಬಬ್ಲ್ ವ್ಯವಸ್ಥೆಯ ಹೊರತಾಗಿಯೂ ಆಟಗಾರರಿಗೆ ಕೊರೋನಾ ತಗುಲಿತ್ತು. ಇದೀಗ ಕೊಹ್ಲಿ ಜನರ ನಡುವೆ ಸೇವಾ ಕಾರ್ಯಕ್ಕೆ ತೊಡಗಿರುವುದು ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇದರ ವಿಡಿಯೋ ಮತ್ತು ಚಿತ್ರಗಳು ವೈರಲ್ ಆಗುತ್ತಿವೆ.