ಕುವೈತ್: ಇವತ್ತಿನ ಜುಮಾ ನಮಾಜ್‌ನೊಂದಿಗೆ ಮಸೀದಿಗಳಲ್ಲಿ ಸಾಮಾಜಿಕ ಅಂತರ ಪಾಲನೆ ನಿಯಮ ರದ್ದು

0
585

ಸನ್ಮಾರ್ಗ ವಾರ್ತೆ

ಕುವೈತ್: ಮಸೀದಿಯಲ್ಲಿ ಸಾಮೂಹಿಕ ನಮಾಜ್‌ನ ವೇಳೆ ಅಂತರ ಕಾಪಾಡಿಕೊಳ್ಳಬೇಕೆಂಬ ಕೊರೋನ ಕಾಲದ ನಿರ್ಬಂಧವು ಅಕ್ಟೋಬರ್ 22ರ ಶುಕ್ರವಾರದ ಜುಮಾ ನಮಾಜ್‌ನೊಂದಿಗೆ ರದ್ದಾಗಲಿದೆ ಎಂದು ಕುವೈತ್ ತಿಳಿಸಿದೆ.

ಇದಕ್ಕೆ ಸಂಬಂಧಿಸಿ ಔಕಾಫ್ ಮಂತ್ರಾಲಯಕ್ಕೆ ಕುವೈತ್ ಸಚಿವಾಲಯ ನಿರ್ದೇಶನ ನೀಡಿದೆ

ಆದರೆ ಮಸೀದಿಗೆ ಪ್ರವೇಶಿಸುವವರು ಕೊರೋನಾ ಪ್ರತಿರೋಧ ಲಸಿಕೆಯನ್ನು ಪಡೆದುಕೊಂಡಿರಬೇಕು, ಮಾಸ್ಕ್ ಧರಿಸಿರಬೇಕು ಮತ್ತು ಪ್ರತಿಯೊಬ್ಬರೂ ಸ್ವತಃ ನಮಾಜಿನ ಚಾಪೆಯನ್ನು ತಂದಿರಬೇಕು ಮುಂತಾದ ನಿಯಮಗಳು ಇನ್ನೂ ಕೆಲವು ಸಮಯ ಇರಲಿದೆ ಎಂದು ಕೂಡ ತಿಳಿಸಲಾಗಿದೆ

ಈ ಮೊದಲು ನಮಾಜ್‌ನಲ್ಲಿ ಅಂತರ ಕಾಪಾಡಿಕೊಳ್ಳುವ ನಿಯಮದ ಕಾರಣದಿಂದಾಗಿ ಮಸೀದಿಯಲ್ಲಿ ಜಾಗ ಸಾಕಾಗದೆ ರಸ್ತೆಯವರೆಗೂ ನಮಾಜ್‌ನ ಸಾಲುಗಳು ಇರುತ್ತಿದ್ದುವು. ಇದೀಗ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಂತಾಗಿದೆ.