ಚೀನದಲ್ಲಿ ಹೊಸ ವೈರಸ್ ಹಾವಳಿ: 35 ಜನರಲ್ಲಿ ಸೋಂಕು ಪತ್ತೆ

0
35

ಸನ್ಮಾರ್ಗ ವಾರ್ತೆ

ಬೀಜಿಂಗ್: ಚೀನದಲ್ಲಿ 35 ಮಂದಿಯಲ್ಲಿ ಲ್ಯಾಂಗ್ಯಾ ಹೆನಿಫಾವೈರಸ್ ಎಂಬ ಹೊಸ ವೈರಸ್ ದೃಢಪಟ್ಟಿದೆ. ಈ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತಿರುವುದಾಗಿ ವರದಿಯಾಗಿದೆ. ಯಕೃತ್ತು ಮತ್ತು ಮೂತ್ರಪಿಂಡಗಳ ಮೇಲೆ ಈ ವೈರಸ್ ಪರಿಣಾಮ ಬೀರುತ್ತದೆ ಎಂದು ತೈವಾನ್ ತೈಪೆ ಟೈಮ್ಸ್ ವರದಿ ಮಾಡಿದೆ.

ಚೀನದ ಹೆನಾನ್ ಪ್ರದೇಶದ ಶಾಂಡಾಂಗ್‌ನಲ್ಲಿ ಈ ವೈರಸ್ ದೃಢಪಟ್ಟಿದ್ದು, ಸೋಂಕಿತ 26 ಮಂದಿಗೆ ಲ್ಯಾಂಗ್ಯಾ ವೈರಸ್ ಬಾಧಿಸಿದೆ. ಇತರ ವೈರಸ್‍ಗಳ ಬಾಧೆ ಇವರ ದೇಹದಲ್ಲಿ ಪತ್ತೆಯಾಗಿಲ್ಲ ಎಂಬುದಾಗಿ ವರದಿ ತಿಳಿಸಿದೆ.

ಅಲ್ಲದೇ, ಬಾವಲಿಗಳಿಂದ ಹರಡುವ ಹೆನಿಪಾ ವೈರಸ್ ಏಷ್ಯ ಹಾಗೂ ಆಸ್ಟ್ರೇಲಿಯದಲ್ಲಿ ರೋಗಕ್ಕೆ ಕಾರಣವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ನಿಫಾ ವೈರಸ್ ಇದೇ ವಿಭಾಗಕ್ಕೆ ಸೇರಿದ್ದು, ವೈರಸ್ ದೃಢೀಕರಣಗೊಂಡ ವಿವರವನ್ನು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಕೂಡ ವರದಿ ಮಾಡಿದೆ. ಜ್ವರಕ್ಕೆ ಕಾರಣವಾಗುವ ಒಂದು ವೈರಸ್ ಚೀನದಲ್ಲಿ ಪತ್ತೆಯಾಗಿರುವುದಾಗಿ ವೈದ್ಯಕೀಯ ಜರ್ನಲ್‌ ವರದಿ ಮಾಡಿದೆ.